ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಪ್ರಮಾಣ ತಗ್ಗಿದೆ. ಬಹುತೇಕ ಕಡೆ ಸಾಧಾರಣ ಮಳೆಯಾಗುತ್ತಿದೆ. ಅಲ್ಲದೆ, ಜಲಾಶಯ ಮಟ್ಟದಲ್ಲಿಯೂ ನೀರಿನ ಶೇಖರಣೆ ಅಷ್ಟಾಗಿ ಆಗಿಲ್ಲ. ಇದು ವಿದ್ಯುತ್ ಉತ್ಪಾದನೆಯ ಮೇಲೆಯೂ ಪರಿಣಾಮ ಬೀರಿದೆ. ಇನ್ನು ರಾಜ್ಯದ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದ್ದು, ಮುಂದಿನ 24ರಿಂದ 48 ಗಂಟೆಗಳಲ್ಲಿ ಕರಾವಳಿ ಮತ್ತು ಉತ್ತರ ಹಾಗೂ ದಕ್ಷಿಣ ಒಳನಾಡುಗಳ ಕೆಲವು ಕಡೆಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Weather Report) ತಿಳಿಸಿದೆ.
ದಕ್ಷಿಣ – ಉತ್ತರ ಒಳನಾಡಿನ ಎಲ್ಲೆಲ್ಲಿ ಮಳೆ?
ದಕ್ಷಿಣ ಒಳನಾಡಿನ (South Inland) ಜಿಲ್ಲೆಯಾದ ತುಮಕೂರಿನಲ್ಲಿ ಅಲ್ಪ ಪ್ರಮಾಣ ಮಳೆಯಾಗುವ ಸಾಧ್ಯತೆ ಇದ್ದು, ಉಳಿದ ಜಿಲ್ಲೆಗಳಲ್ಲಿ ಅತಿ ಕಡಿಮೆ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಉತ್ತರ ಒಳನಾಡಿನ (North Inland) ಜಿಲ್ಲೆಯಾದ ಬೀದರ್, ಬಾಗಲಕೋಟೆ, ಕಲಬುರಗಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Marriage in trouble : ಮದುವೆಯಾದರೂ ಮಂಚಕ್ಕೆ ಬಾರದ ಪತಿ; ಅವನ ಮೊಬೈಲ್ ನೋಡಿ ಬೆಚ್ಚಿಬಿದ್ದ ಪತ್ನಿ!
ಮಲೆನಾಡು – ಕರಾವಳಿಯಲ್ಲಿ ಸಾಧಾರಣ ಮಳೆ
ಮಲೆನಾಡು ಜಿಲ್ಲೆಗಳಲಾದ (Malnad Districts) ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಪ್ರದೇಶಗಳ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೆ, ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗುವ (coastal regions Rainfall) ಸಾಧ್ಯತೆಯಿದೆ.
ಬೆಂಗಳೂರಲ್ಲಿ ಬಿಸಿಲೂ ಇದೆ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾತಾವರಣದಲ್ಲಿ ಆಗಾಗ ಬದಲಾವಣೆ ಇರುತ್ತದೆ. ಒಮ್ಮೊಮ್ಮೆ ಬಿಸಿಲಿನ ವಾತಾವರಣ ಇದ್ದರೆ, ಕೆಲವೊಮ್ಮೆ ಮೋಡ ಕವಿಯಲಿದೆ. ಕೆಲವೇ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ (Bangalore Rain) ಸಾಧ್ಯತೆ ಇದೆ. ಇನ್ನು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ ಉಷ್ಣಾಂಶವು 31 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Gay Husband : ಹುಡುಗಿಯರು ಇನ್ನು ಮದುವೆ ಗಂಡಿಗೆ ಪರಪುರುಷರ ಸಂಪರ್ಕ ಇದ್ಯಾ ಅಂತಾನೂ ಚೆಕ್ ಮಾಡ್ಕೊಬೇಕು!
ಕುಸಿದಿರುವ ಮಳೆ ಪ್ರಮಾಣ
ರಾಜ್ಯದಲ್ಲಿ ಮಳೆ ಪ್ರಮಾಣವು ಗಣನೀಯವಾಗಿ ಕುಸಿದಿದೆ. 6 ಸೆಂ.ಮೀ. 5 ಸೆಂ.ಮೀ. ಲೆಕ್ಕದಲ್ಲಿ ಬರುತ್ತಿದ್ದ ಮಳೆಯ ತೀವ್ರತೆ ಈಗ ಕೇವಲ 2 ಸೆಂ.ಮೀ.ಗೆ ಇಳಿಕೆ ಕಂಡಿದೆ. ಅದೂ ಸಹ ಎಲ್ಲ ಜಿಲ್ಲೆಗಳಲ್ಲಿ ಸುರಿಯುತ್ತಿಲ್ಲ. ಬೆರಳೆಣಿಕೆ ಜಿಲ್ಲೆಗಳಲ್ಲಿ ಮಾತ್ರವೇ ಮಳೆಯಾಗಿದೆ. ಆಗಸ್ಟ್ 15ರ ಮಂಗಳವಾರ ಕೊಪ್ಪಳ, ಮುನಿರಾಬಾದ್, ಹೊಸಪೇಟೆಯಲ್ಲಿ ತಲಾ 2 ಸೆಂ.ಮೀ. ಮಳೆಯಾದರೆ, ರಾಯಚೂರು, ಸಿಂಧನೂರು ಪ್ರದೇಶದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.