Site icon Vistara News

Kannada Sahitya Sammelana | ಸಮ್ಮೇಳನದ ಪ್ರತಿನಿಧಿ ನೋಂದಣಿ, ಪುಸ್ತಕ, ವಾಣಿಜ್ಯ ಮಳಿಗೆಗಳ ನೋಂದಣಿಗೆ ಚಾಲನೆ

Kannada Sahitya Parishat's Dr. Pandappa Lakshmana Hoogara, Dr. H. Vishwanath-M.S. Indira Endowment award Announcemed

ಬೆಂಗಳೂರು: ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವವರ ಸಹಾಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆ್ಯಪ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ. ಪ್ರತಿನಿಧಿ ನೋಂದಣಿ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿ, ಸಮ್ಮೇಳನದ ಆಮಂತ್ರಣ ಪತ್ರಿಕೆ, ವಿವಿಧ ಸಮಿತಿಗಳು ಮತ್ತು ಸಮಿತಿಯ ಸದಸ್ಯರ ವಿವರಗಳು, ಹಾವೇರಿ ಕುರಿತಂತೆ ಮಾಹಿತಿ, ಸಾರಿಗೆ, ಸಂಪರ್ಕ, ವಸತಿ ವಿವರ, ಸಹಾಯವಾಣಿ ಸೇರಿ ಸಮ್ಮೇಳನದ ಸಂಪೂರ್ಣ ಮಾಹಿತಿ, ವಿವರಗಳನ್ನು ಒದಗಿಸಲು ಆ್ಯಪ್ ನೆರವಾಗಲಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಹಿತ್ಯ ಸಮ್ಮೇಳನವನ್ನು ಹೆಸರಾಂತ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ೨೦೨೩ರ ಜನವರಿ ೬, ೭ ಹಾಗೂ ೮ ರಂದು ಮೂರು ದಿನಗಳ ಕಾಲ ನಡೆಸಲು ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದ್ದು, ಹುಬ್ಬಳ್ಳಿ-ಹಾವೇರಿ ಮುಖ್ಯರಸ್ತೆಯ ಆರ್.ಟಿ.ಓ. ಕಚೇರಿ ಸಮೀಪದ ಅಜ್ಜಯ್ಯನ ದೇವಸ್ಥಾನದ ಎದುರಿನ ಸ್ಥಳದಲ್ಲಿ ಸಮ್ಮೇಳನವನ್ನು ನಡೆಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Kannada Sahitya Sammelana | ನಾಳೆ ಭುವನಗಿರಿಯಲ್ಲಿ ಕನ್ನಡ ಜ್ಯೋತಿ ಹೊತ್ತ ‘ಕನ್ನಡ ರಥ’ಕ್ಕೆ ಚಾಲನೆ

ಸಮ್ಮೇಳನದ ಪ್ರತಿನಿಧಿ ನೋಂದಣಿಗಾಗಿ
ಈ ಅಕ್ಷರ ಜಾತ್ರೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭಿಮಾನಿಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ೫೦೦ ರೂ. ಶುಲ್ಕ ಆ್ಯಪ್ ಮೂಲಕವೇ ಪಾವತಿಸಿ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಡಂತಿದೆ.

ನೋಂದಣಿ ಪ್ರಕ್ರಿಯೆಗಳು
೧) ಪ್ರತಿನಿಧಿಗಳಾಗಿ ಭಾಗವಹಿಸಲು ನೋಂದಾಯಿಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಒಎಸ್) ಸ್ಟೋರ್‌ನಲ್ಲಿ https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳತಕ್ಕದ್ದು.
೨) ದಿನಾಂಕ ೦೧-೧೨-೨೦೨೨ ರ ಮಧ್ಯರಾತ್ರಿ ೧೨.೦೦ ರಿಂದ ನೋಂದಣಿ ಲಭ್ಯವಿದ್ದು, ದಿನಾಂಕ ೧೮-೧೨-೨೦೨೨ (ರಾತ್ರಿ ೧೨.೦೦ರ ವರೆಗೆ) ಅಂತಿಮ ದಿನವಾಗಿರುತ್ತದೆ.
೩) ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಪ್ರತಿನಿಧಿಗಳ ನೋಂದಣಿಗೆ ಅವಕಾಶವಿರುವುದಿಲ್ಲ.

ನೋಂದಾಯಿತ ಪ್ರತಿನಿಧಿಗಳಿಗೆ ಸಿಗುವ ಅನುಕೂಲತೆಗಳು / ಸೌಲಭ್ಯಗಳು:
೧) ಹಾವೇರಿ ಜಿಲ್ಲೆಯಿಂದ ನೋಂದಾಯಿಸುವ ಪ್ರತಿನಿಧಿಗಳಿಗೆ ಹೊರತುಪಡಿಸಿ, ಮಿಕ್ಕುಳಿದ ಎಲ್ಲಾ ಜಿಲ್ಲೆಗಳ, ಹೊರ ರಾಜ್ಯಗಳ ನೋಂದಾಯಿತ ಪ್ರತಿನಿಧಿಗಳಿಗೆ ಲಭ್ಯವಿರುವ ವಸತಿ ಏರ್ಪಾಟುಗೊಳಿಸಲಾಗುವುದು.
೨) ವಸತಿ ಸ್ಥಳದಿಂದ ಸಮ್ಮೇಳನದ ಸ್ಥಳಕ್ಕೆ ಲಭ್ಯವಿರುವ ಸಾರಿಗೆ ವ್ಯವಸ್ಥೆ ಮಾಡಲಾಗುವುದು.
೩) ನೋಂದಾಯಿತ ಎಲ್ಲಾ ಪ್ರತಿನಿಧಿಗಳಿಗೆ ಊಟ/ಉಪಾಹಾರದ ವ್ಯವಸ್ಥೆ ಕೈಗೊಳ್ಳಲಾಗುವುದು.
೪) ಕಿಟ್ ಮತ್ತು ಬ್ಯಾಡ್ಜ್ ನೀಡಲಾಗುವುದು.
೫) ಒಒಡಿ ಹಾಜರಾತಿ ಪ್ರಮಾಣ ಪತ್ರ ನೀಡಲಾಗುವುದು.

ಪುಸ್ತಕ ಮಳಿಗೆಗಳ ನೋಂದಣಿಗಾಗಿ
ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಪ್ರಕಾಶಕರು, ಮಾರಾಟಗಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ಪುಸ್ತಕ ಮಳಿಗೆ ಒಂದಕ್ಕೆ ೩,೦೦೦ ರೂ.ಶುಲ್ಕವನ್ನು ಆ್ಯಪ್ ಮೂಲಕವೇ ಪಾವತಿಸಿ ಮಳಿಗೆಗಳನ್ನು ತೆರೆಯಲು ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಂಡಂತಿದೆ.

ನೋಂದಣಿ ಪ್ರಕ್ರಿಯೆಗಳು :
೧) ಪುಸ್ತಕ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಲೇಖಕರು, ಪ್ರಕಾಶಕರು, ಮಾರಾಟಗಾರರು, ಪುಸ್ತಕ ಮಳಿಗೆಯ ಮುಖ್ಯಸ್ಥರು / ಮೇಲ್ವಿಚಾರಕರು ವೈಯಕ್ತಿಕವಾಗಿ ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್‌ನಲ್ಲಿ https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಮಳಿಗೆಯನ್ನು ನೋಂದಾಯಿಸಿಕೊಳ್ಳತಕ್ಕದ್ದು.
೨) ಡಿಸೆಂಬರ್ ೦೧ ರಂದು ಮಧ್ಯರಾತ್ರಿ ೧೨.೦೦ ರಿಂದ ಮಳಿಗೆಗಳ ನೋಂದಣಿ ಲಭ್ಯವಿದ್ದು, ದಿನಾಂಕ ೧೮ರ ರಾತ್ರಿ ೧೨.೦೦ರ ವರೆಗೆ ಅಂತಿಮ ದಿನವಾಗಿರುತ್ತದೆ.
೩) ಮೂರು ದಿವಸಗಳಿಗೆ ಒಂದು ಹಾಗೂ ಒಂದಕ್ಕಿಂತ ಹೆಚ್ಚು ಪುಸ್ತಕ ಮಳಿಗೆ ಬೇಕಾದಲ್ಲಿ ತಲಾ ೩,೦೦೦ ರೂ. ಗಳ ಬಾಡಿಗೆ ನೀಡುವುದು.
೪) ಕಡ್ಡಾಯವಾಗಿ ಕನ್ನಡ ಪುಸ್ತಕ ಮಾರಾಟಕ್ಕೆ ಮಾತ್ರ ಅವಕಾಶ. ಬೇರೆ ಭಾಷೆಗಳ ಪುಸ್ತಕ ಮಾರಾಟ ಕಂಡುಬಂದಲ್ಲಿ ಮಾರಾಟಕ್ಕೆ ನೀಡಲಾದ ಪರವಾನಗಿಯನ್ನು ರದ್ದುಪಡಿಸಲಾಗುವುದು.
೫) ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡುಬAದಲ್ಲಿ ಪರವಾನಗಿಯನ್ನು ರದ್ದುಪಡಿಸಿ, ಮಳಿಗೆಯನ್ನು ತೆರವುಗೊಳಿಸಲಾಗುವುದು.
೬) ನೋಂದಣಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
೭) ಮಳಿಗೆಗಳ ಹಂಚಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಆಧಾರದ ಮೇಲೆ ನಿರ್ಧರಿಸಲಾಗುವುದು ಮತ್ತು ಹಂಚಿಕೆಯ ದಾಖಲಾತಿ ಚಿತ್ರೀಕರಣ ಮಾಡಲಾಗುವುದು.
೮) ಮಳಿಗೆಗಳ ಹಂಚಿಕೆ ಆಗದಿದ್ದರೆ ಅವರ ಹಣವನ್ನು ಸಮ್ಮೇಳನದ ನಂತರ ೬೦ ದಿನಗಳಲ್ಲಿ ಮರಳಿಸಲಾಗುವುದು.
೯) ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಮಳಿಗೆಗಳ ನೋಂದಣಿಗೆ ಅವಕಾಶವಿರುವುದಿಲ್ಲ.

ನೋಂದಾಯಿತ ಪುಸ್ತಕ ಮಳಿಗೆಯಲ್ಲಿ ಸಿಗುವ ಅನುಕೂಲತೆಗಳು / ಸೌಲಭ್ಯಗಳು :
೧) ಪ್ರತಿ ಮಳಿಗೆಗೆ ವಿದ್ಯುತ್ ಸೌಕರ್ಯ ಒದಗಿಸಲಾಗುವುದು.
೨) ಮಳಿಗೆಯೊಂದಕ್ಕೆ ೨ ಕುರ್ಚಿಗಳು, ೨ ಬೆಂಚುಗಳನ್ನು ಒದಗಿಸಲಾಗುವುದು.
೩) ಮಳಿಗೆಯೊಂದಕ್ಕೆ ನಾಲ್ವರಿಗೆ ಮಾತ್ರ ಊಟ/ಉಪಾಹಾರದ ವ್ಯವಸ್ಥೆಗೊಳಿಸಲಾಗುವುದು.
ಸೂಚನೆ : ಒಂದು ವೇಳೆ ಮಳಿಗೆಗಳಲ್ಲಿ ಒದಗಿಸಲಾಗಿದ್ದ ಸೌಲಭ್ಯಗಳು ಬೆಂಚು, ಕುರ್ಚಿ, ವಿದ್ಯುತ್ ದೀಪ – ಇವುಗಳನ್ನು ಹಾಳುಮಾಡಿದ್ದಲ್ಲಿ ಮಳಿಗೆದಾರರಿಂದಲೇ ದಂಡ ವಸೂಲಿ ಮಾಡಲಾಗುವುದು.

ವಾಣಿಜ್ಯ ಮಳಿಗೆಗಳ ನೋಂದಣಿಗಾಗಿ
ಸಮ್ಮೇಳನದಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಮಾರಾಟಗಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ವಾಣಿಜ್ಯ ಮಳಿಗೆ ಒಂದಕ್ಕೆ ೫,೦೦೦ ರೂ. ಶುಲ್ಕವನ್ನು ಆ್ಯಪ್ ಮೂಲಕವೇ ಪಾವತಿಸಿ ಮಳಿಗೆಗಳನ್ನು ತೆರೆಯಲು ನೋಂದಾಯಿಸಿಕೊಳ್ಳಬಹುದಾಗಿದೆ. ವಿವರಗಳು ಈ ಕೆಳಕಂಡಂತಿದೆ.

ನೋಂದಣಿ ಪ್ರಕ್ರಿಯೆಗಳು :
೧) ವಾಣಿಜ್ಯ ಮಳಿಗೆಗಳನ್ನು ತೆರೆಯಲು ಇಚ್ಛಿಸುವ ಮಾರಾಟಗಾರರು, ಮುಖ್ಯಸ್ಥರು / ಮೇಲ್ವಿಚಾರಕರು ವೈಯಕ್ತಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://bit.ly/kasapapp ಆ್ಯಪ್ ಮೂಲಕ / ಆ್ಯಪಲ್ (ಐಓಎಸ್) ಸ್ಟೋರ್‌ನಲ್ಲಿ https://apple.co/3zaw231 ಮೊದಲು ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ಯತ್ವ ಪಡೆದ ತಕ್ಷಣವೇ ದೊರೆಯುವ ಸದಸ್ಯತ್ವ ಸಂಖ್ಯೆಯನ್ನು ಸಮ್ಮೇಳನದ ಆ್ಯಪ್‌ನಲ್ಲಿ https://play.google.com/store/apps/details?id=com.tritantra.kasapa ನಮೂದಿಸಿ ಮಳಿಗೆಯನ್ನು ನೋಂದಾಯಿಸಿಕೊಳ್ಳತಕ್ಕದ್ದು.
೨) ದಿನಾಂಕ ೦೧-೧೨-೨೦೨೨ ರ ಮಧ್ಯರಾತ್ರಿ ೧೨.೦೦ ರಿಂದ ಮಳಿಗೆಗಳ ನೋಂದಣಿ ಲಭ್ಯವಿದ್ದು, ದಿನಾಂಕ ೧೮-೧೨-೨೦೨೨ (ರಾತ್ರಿ ೧೨.೦೦ರ ವರೆಗೆ) ಅಂತಿಮ ದಿನವಾಗಿರುತ್ತದೆ.
೩) ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಪರವಾನಗಿಯನ್ನು ರದ್ದುಪಡಿಸಿ, ಮಳಿಗೆಯನ್ನು ತೆರವುಗೊಳಿಸಲಾಗುವುದು.
೪) ನೋಂದಣಿಯಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
೫) ಮಳಿಗೆಗಳ ಹಂಚಿಕೆಯನ್ನು ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಟರಿ ಆಧಾರದ ಮೇಲೆ ನಿರ್ಧರಿಸಲಾಗುವುದು ಮತ್ತು ಹಂಚಿಕೆಯ ದಾಖಲಾತಿ ಚಿತ್ರಿಕರಣ ಮಾಡಲಾಗುವುದು.
೬) ಮಳಿಗೆಗಳ ಹಂಚಿಕೆ ಆಗದಿದ್ದರೆ ಅವರ ಹಣವನ್ನು ಸಮ್ಮೇಳನದ ನಂತರ ೬೦ ದಿವಸಗಳಲ್ಲಿ ಮರಳಿಸಲಾಗುವುದು.
೭) ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಮಳಿಗೆಗಳ ನೋಂದಣಿಗೆ ಅವಕಾಶವಿರುವುದಿಲ್ಲ.

ನೋಂದಾಯಿತ ವಾಣಿಜ್ಯ ಮಳಿಗೆಯಲ್ಲಿ ಸಿಗುವ ಅನುಕೂಲತೆಗಳು / ಸೌಲಭ್ಯಗಳು:
೧) ಪ್ರತಿ ಮಳಿಗೆಗೆ ವಿದ್ಯುತ್ ಸೌಕರ್ಯ ಒದಗಿಸಲಾಗುವುದು.
೨) ಮಳಿಗೆಯೊಂದಕ್ಕೆ ೨ ಕುರ್ಚಿಗಳು, ೨ ಬೆಂಚುಗಳನ್ನು ಒದಗಿಸಲಾಗುವುದು.
೩) ಮಳಿಗೆಯೊಂದಕ್ಕೆ ನಾಲ್ವರಿಗೆ ಮಾತ್ರ ಊಟ/ಉಪಾಹಾರದ ವ್ಯವಸ್ಥೆಗೊಳಿಸಲಾಗುವುದು.
ಸೂಚನೆ : ಒಂದು ವೇಳೆ ಮಳಿಗೆಗಳಲ್ಲಿ ಒದಗಿಸಲಾಗಿದ್ದ ಸೌಲಭ್ಯಗಳು ಬೆಂಚು, ಕುರ್ಚಿ, ವಿದ್ಯುತ್ ದೀಪ – ಇವುಗಳನ್ನು ಹಾಳುಮಾಡಿದ್ದಲ್ಲಿ ಮಳಿಗೆದಾರರಿಂದಲೇ ದಂಡ ವಸೂಲಿ ಮಾಡಲಾಗುವುದು.

೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಹಾಗೂ ವಸ್ತು ಪ್ರದರ್ಶನ ಸಮಿತಿಗೆ ಮಾಜಿ ಶಾಸಕ ಯು.ಬಿ. ಬಣಕಾರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಂ. ಸಾಲಿ ಅವರ ಉಪಾಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಲಾಗಿದೆ. ಪುಸ್ತಕ / ವಾಣಿಜ್ಯ ಮಳಿಗೆಯಲ್ಲಿನ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕುರಿತು ಈ ಕೆಳಕಂಡವರನ್ನು ಸಂಪರ್ಕಿಲು ಕೋರಿದೆ.

೧) ವಿನಾಯಕ ಜೋಶಿ, ಜಂಟಿ ನಿರ್ದೇಶಕರು, ಕೈಗಾರಿಕಾ ಇಲಾಖೆ, ಹಾವೇರಿ. ಮೊ. ೮೬೬೦೩೪೮೫೦೫
೨) ಲಿಂಗಯ್ಯ ಹಿರೇಮಠ, ಅಧ್ಯಕ್ಷರು, ಹಾವೇರಿ ಜಿಲ್ಲಾ ಕ.ಸಾ.ಪ., ಮೊ. ೯೯೦೨೭೬೮೭೦೪
೩) ವೈ.ಬಿ. ಆಲದಕಟ್ಟಿ, ಅಧ್ಯಕ್ಷರು, ಹಾವೇರಿ ತಾಲ್ಲೂಕು ಕ.ಸಾ.ಪ., ಮೊ. ೯೮೮೦೨೬೮೨೬೫
೪) ಪಾರ್ಶ್ವನಾಥ್, ಕ.ಸಾ.ಪ., ಮೊ. ೯೯೦೧೦೫೯೮೮೮
೫) ಧನಂಜಯ, ಕ.ಸಾ.ಪ., ಮೊ. ೯೯೮೦೬೦೮೧೮೨

ಇದನ್ನೂ ಓದಿ | Kannada Flag | ಬೆಳಗಾವಿಯಲ್ಲಿ ಕಾಲೇಜಿಗೂ ಕಾಲಿಟ್ಟ ಭಾಷಾ ದ್ವೇಷ; ಕಾರ್ಯಕ್ರಮದಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿತ

Exit mobile version