Site icon Vistara News

Siddaramaiah: ರಾಜ್ಯಕ್ಕೆ ವಿಶೇಷ, ನಿರ್ದಿಷ್ಟ ಅನುದಾನ ಬಿಡುಗಡೆ ಮಾಡಿ; ಕೇಂದ್ರ ಹಣಕಾಸು ಸಚಿವೆಗೆ ಸಿದ್ದರಾಮಯ್ಯ ಪತ್ರ

Nirmala sitharaman and Siddaramaiah

ಬೆಂಗಳೂರು: 15ನೇ ಹಣಕಾಸು ಆಯೋಗವು ಕರ್ನಾಟಕದ ತೆರಿಕೆ ಹಂಚಿಕೆಯ ಪಾಲನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಇದರಿಂದ ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಹೀಗಾಗಿ ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಬರಬೇಕಾದ ವಿಶೇಷ ಮತ್ತು ನಿರ್ದಿಷ್ಟ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸಿಎಂ ಸಿದ್ದರಾಮಯ್ಯ (Siddaramaiah) ಪತ್ರ ಬರೆದಿದ್ದಾರೆ.

14ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯ ತೆರಿಗೆ ಹಂಚಿಕೆ ಪಾಲು ಶೇ 4.71 ಇತ್ತು. ಆದರೆ, ಈ ಪ್ರಮಾಣವನ್ನು 15ನೇ ಹಣಕಾಸು ಆಯೋಗ ಶೇ. 3.64ಕ್ಕೆ ಇಳಿಸಿದೆ. 2011ರ ಅಂಕಿ ಅಂಶಗಳ ಪ್ರಕಾರ ಒಟ್ಟು ರಾಜ್ಯ ದೇಶಿಯ ಉತ್ಪನ್ನ (ಜಿಎಸ್‌ಡಿಪಿ) ಇತರೆ ರಾಜ್ಯಗಳ ಸರಾಸರಿ ಬೆಳವಣಿಗೆ ಶೇ.9ರ ಒಳಗೆ ಇದ್ದರೆ, ಕರ್ನಾಟಕವು ಶೇ.30 ವೃದ್ಧಿ ಸಾಧಿಸಿದೆ. ಜತೆಗೆ ಐಟಿ ಕ್ಷೇತ್ರದಲ್ಲಿ ರಾಜ್ಯ ಅತ್ಯುತ್ತಮ ಬೆಳವಣಿಗೆ ಕಂಡಿದೆ. ಆದರೆ, ಐಟಿ ಸೇವೆ ರಫ್ತು ಶೂನ್ಯ ದರ ಹೊಂದಿರುವುದರಿಂದ ರಾಜ್ಯ ತೆರಿಗೆಗಳಿಗೆ ಇದರಿಂದ ಸಹಕಾರಿಯಾಗಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ತೆರಿಗೆ ಪಾಲಿನಲ್ಲಿ ಶೇ.23 ಕಡಿತ ಮಾಡಲಾಗಿದೆ. ಇದರಿಂದ 2020-24ರವರೆಗೆ ರಾಜ್ಯಕ್ಕೆ ಬರಬೇಕಾದ ಪಾಲಿನಲ್ಲಿ ಒಟ್ಟು 37,011 ಕೋಟಿ ರೂ. ಕಡಿಮೆಯಾಗಿದೆ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ 2020-21ನೇ ಆರ್ಥಿಕ ವರ್ಷಕ್ಕೆ 5,495 ವಿಶೇಷ ಅನುದಾನ ನೀಡುವಂತೆ ಶಿಫಾರಸು ಮಾಡಿತ್ತು. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಸಿಎಂ ಸಿದ್ದಾರಾಮಯ್ಯ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Chaluvaraya Swami : ಕೃಷಿ ಸಚಿವರ ವಿರುದ್ಧ ನಕಲಿ ಲಂಚ ಪತ್ರ ಸೃಷ್ಟಿ: ಇಬ್ಬರಿಗೆ ಮೂರು ದಿನ ಪೊಲೀಸ್‌ ಕಸ್ಟಡಿ

ಆಯೋಗದ 2021-26ರ ಅಂತಿಮ ವರದಿಯಲ್ಲಿ ಬೆಂಗಳೂರಿನ ಸಮಗ್ರ ನೀರಾವರಿ ಹಾಗೂ ಪೆರಿಫೆರಲ್‌ ರಿಂಗ್‌ ರೋಡ್‌ ನಿರ್ಮಾಣಕ್ಕೆ 6000 ಕೋಟಿ ರೂ. ನಿರ್ದಿಷ್ಟ ಅನುದಾನ ನೀಡಲು ಶಿಫಾರಸು ಮಾಡಲಾಗಿತ್ತು. ಆದರೆ, ಯಾವುದೇ ಅನುದಾನ ಕರ್ನಾಟಕ್ಕೆ ನೀಡಿಲ್ಲ. ಇದರಿಂದ ರಾಜ್ಯದ ಹಣಕಾಸು ಸ್ಥಿತಿಗೆ ಹಿನ್ನಡೆ ಆಗಿದೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಅರ್ಥಮಾಡಿಕೊಂಡು ವಿಶೇಷ ಅನುದಾನ ಮತ್ತು ನಿರ್ದಿಷ್ಟ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸಿಎಂ ಕೋರಿದ್ದಾರೆ.

Exit mobile version