Site icon Vistara News

Republic Day :ಎಡಿಜಿಪಿ ಸೌಮೇಂದು ಮುಖರ್ಜಿ ಸೇರಿ ರಾಜ್ಯದ 21 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

President Medal

ಬೆಂಗಳೂರು: 75ನೇ ಗಣರಾಜ್ಯೋತ್ಸವ (Republic Day) ಹಿನ್ನೆಲೆಯಲ್ಲಿ ಎಡಿಜಿಪಿ ಸೌಮೇಂದು ಮುಖರ್ಜಿ (ADGP Soumendu Mukharjee) ಸೇರಿದಂತೆ ರಾಜ್ಯದ 21 ಮಂದಿ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ (President Medal) ಘೋಷಿಸಲಾಗಿದೆ. ಎಡಿಜಿಪಿ ಸೌಮೇಂದು ಮುಖರ್ಜಿ ಮತ್ತು ಡಿವೈಎಸ್ಪಿ ಸುಧೀರ್ ಮಹದೇವ್ ಹೆಗ್ಡೆ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು ಪ್ರವೀಣ್‌ ಮಧುಕರ್‌ ಪವಾರ್‌, ರಮಣ್‌ ಗುಪ್ತಾ ಸೇರಿದಂತೆ 19 ಮಂದಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾದವರು

1. ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಸೌಮೇಂದು ಮುಖರ್ಜಿ
2. ಡಿವೈಎಸ್‌ಪಿ ಸುಧೀರ್ ಹೆಗ್ಡೆ

ಪ್ರಶಂಸನೀಯ ಸೇವಾ ಪದಕ ಪಡೆದವರು

  1. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ಐಜಿಪಿ ರಮಣ್ ಗುಪ್ತಾ
  2. ಸಿಬಿಐನಲ್ಲಿರುವ ಐಜಿಪಿ ಪ್ರವೀಣ್ ಮಧುಕರ್ ಪವಾರ್
  3. ಎಎಸ್‌ಪಿ ಅನಿಲ್‌ಕುಮಾರ್.ಎಸ್,
  4. ಎಸಿಪಿ ಶಿವಗಂಗೆ ಪುಟ್ಟರಂಗಪ್ಪ
  5. ಡಿವೈಎಸ್‌ಪಿ ರಘು ಕುಮಾರ್,
  6. ಎಸಿಪಿ ನಾರಾಯಣಸ್ವಾಮಿ
  7. ಡಿವೈಎಸ್‌ಪಿ ಶ್ರೀನಿವಾಸ್ ರಾಜ್ ಬೆಟೋಲಿ
  8. ಪೊಲೀಸ್ ಇನ್ಸ್‌ಪೆಕ್ಟರ್ ಮಾಸ್ತೇನಹಳ್ಳಿ ರಾಮಪ್ಪ ಹರೀಶ್
  9. ಇನ್ಸ್‌ಪೆಕ್ಟರ್ ಸಣ್ಣ ರಂಗಪ್ಪ ವಿರೇಂದ್ರ ಪ್ರಸಾದ್
  10. ಸಬ್ ಇನ್ಸ್‌ಪೆಕ್ಟರ್ ದಾದಾಪೀರ್ ಕಣ್ಣೂರ್ ಸಾಬ್
  11. ವೈರಲೆಸ್ ಎಎಸ್‌ಐ ಸುರೇಶ್ ರಾಮಪ್ಪ ಪುಂಡಲಿಕಟ್ಟಿ
  12. ಎಎಸ್‌ಐ ರಾಮ
  13. ಎಸ್‌ಪಿ ಕಮಾಂಡೆಂಟ್ ಸಿಬ್ಬಂದಿ ನಾಗರಾಜ್ ಅಂಜಪ್ಪ
  14. ಹೆಡ್ ಕಾನ್ಸ್‌ಟೇಬಲ್ ಸಿ.ವಿ.ಗೋವಿಂದರಾಜು
  15. ಹೆಡ್ ಕಾನ್ಸ್‌ಟೇಬಲ್ ಮಣಿಕಂಠ ಮಂದರ್ ಬೈಲ್
  16. ಎಸ್‌ಐ ಸಮಂತ್.ಎಸ್,
  17. ಹೆಡ್ ಕಾನ್ಸ್‌ಟೇಬಲ್ ನರಸಿಂಹರಾಜು ಎಸ್.ಎನ್
  18. ಎಸ್‌ಐ ಪುಂಡಲಿಕ್ ಜೆ.ವಿ.ರಾಮರಾವ್ ನಾಯಕ್‌
  1. ವಿಶಿಷ್ಟ ಸೇವಾ ಪದಕ ಭಾರತೀಯ ಸಶಸ್ತ್ರ ಪಡೆಗಳಲ್ಲಿ ನೀಡುವ ಒಂದು ಪ್ರಶಸ್ತಿಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಯಾವುದೇ ಶ್ರೇಣಿಗಳ ಹುದ್ದೆ ಹೊಂದಿರುವವರ ಉನ್ನತ ರೀತಿಯ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ.
  2. ಇದನ್ನೂ ಓದಿ : Republic Day Bangle Styling: ಗಣರಾಜ್ಯೋತ್ಸವದ ಸಂಭ್ರಮಕ್ಕೆ ತಿರಂಗಾ ಬ್ಯಾಂಗಲ್ಸ್ ಸಾಥ್‌!
Exit mobile version