ಗದಗ: ಹಳ್ಳಿಗರ ಸಮಸ್ಯೆಯನ್ನು ಬಗೆಹರಿಸಬೇಕು, ಎಲ್ಲವೂ ಶೀಘ್ರವಾಗಿ ಇತ್ಯರ್ಥಗೊಂಡು ಆಡಳಿತವು ಸುಗಮ ಆಗಬೇಕೆಂಬ ನಿಟ್ಟಿನಲ್ಲಿ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹಳ್ಳಿಗರಿಂದ ವಿಶಿಷ್ಟ ಬೇಡಿಕೆಯೊಂದು ಬಂದಿದೆ. ಗ್ರಾಮದಲ್ಲಿ ೬೦೦ಕ್ಕೂ ಹೆಚ್ಚು ಮದ್ಯ ಪ್ರಿಯರು ಇದ್ದು, ಮೂರು ಬಾರ್ ಅನ್ನು ಪ್ರಾರಂಭಿಸಲು ಅನುಮತಿ ನೀಡಿ ಎಂಬ ಬೇಡಿಕೆಯನ್ನು (Request for Bar) ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಸಾರ್ವಜನಿಕರು ಇಟ್ಟಿದ್ದಾರೆ.
ಕುರಹಟ್ಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯವನ್ನು ಆಯೋಜಿಸಲಾಗಿತ್ತು. ಈ ವೇಳೆ ಗ್ರಾಮದ ಜನರು ತಮ್ಮ ಸಮಸ್ಯೆಯೊಂದನ್ನು ತಹಸೀಲ್ದಾರ್ ವಾಣಿ ಉಂಕಿ ಅವರ ಮುಂದೆ ಬಿಚ್ಚಿಟ್ಟಿದ್ದಾರೆ. ತಮ್ಮ ಗ್ರಾಮಕ್ಕೆ ಬಾರ್ ಅವಶ್ಯಕತೆ ಎಷ್ಟಿದೆ ಎಂಬ ಬಗ್ಗೆಯೂ ಕಾರಣ ಸಹಿತ ಹೇಳಿದ್ದಾರೆ.
ಏಕೆ ಬಾರ್ ಬೇಕೆಂಬ ಬೇಡಿಕೆ?
ಕುರಹಟ್ಟಿ ಹಾಗೂ ಸುತ್ತಮುತ್ತ ಯಾವುದೇ ಮದ್ಯದ ಅಂಗಡಿ ಇಲ್ಲ. ಈ ಗ್ರಾಮದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಮದ್ಯ ಪ್ರಿಯರು ಇದ್ದಾರೆ. ಇವರೆಲ್ಲರಿಗೂ ಇದರಿಂದ ಸಮಸ್ಯೆಯಾಗುತ್ತಿದೆ. ಅಲ್ಲದೆ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಿದೆ. ಇದನ್ನು ನಿಯಂತ್ರಣ ಮಾಡುವಂತೆ ಪೊಲೀಸರು ಹಾಗೂ ಅಬಕಾರಿ ಇಲಾಖೆಗೆ ಎಷ್ಟೇ ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಮನಸ್ಸು ಮಾಡಿ ನಮ್ಮ ಗ್ರಾಮಕ್ಕೆ ಮೂರು ಬಾರ್ ಅನ್ನು ಅಧಿಕೃತವಾಗಿ ಪ್ರಾರಂಭ ಮಾಡಿಸಬೇಕು ಎಂದು ಮೊರೆ ಇಟ್ಟಿದ್ದಾರೆ.
ಇದನ್ನೂ ಓದಿ | Voter data | ಸಿಎಂ ಬೊಮ್ಮಾಯಿ ಹಗರಣದ ರಿಯಲ್ ಕಿಂಗ್ ಪಿನ್ ಎಂದ ಕಾಂಗ್ರೆಸ್, ರಾಜೀನಾಮೆಗೆ ಒತ್ತಾಯ