ಬೆಳಗಾವಿ: ಬೆಳಗಾವಿಯಲ್ಲಿ (Belagam) ಜೀವನದಲ್ಲಿ ಜೀಗುಪ್ಸೆ ಹೊಂದಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಸ್ಥಳೀಯ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಸಾಹಸ ಮತ್ತು ಸಮಯಪ್ರಜ್ಞೆಯಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.
ಬೆಳಗಾವಿಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಶೀವಲೀಲಾ ಪರ್ವತಗೌಡ್ರ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ. ಮಹಿಳೆ ಕೆರೆಗೆ ಹಾರಿದನ್ನು ಗಮನಿಸಿ ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಉತ್ತರ ಸಂಚಾರ ಠಾಣೆ ಪಿಸಿಗೆ ತಿಳಿಸಿದರು. ಕೆರೆಗೆ ಹಾರಿ ಮುಳುಗುತ್ತಿದ್ದ ಮಹಿಳೆಯನ್ನು ಟ್ರಾಫಿಕ್ ಕಾನ್ಸ್‌ಸ್ಟೇಬಲ್ ಕಾಶಿನಾಥ ಈರಿಗಾರ ಅವರು ರಕ್ಷಿಸಿದರು.
ಕೆರೆಗೆ ಬಿದ್ದ ಮಹಿಳೆ ರಕ್ಷಣೆ ಮಾಡಿದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಐದು ಅಡಿ ಎತ್ತರದ ಬ್ಯಾರಿಕೇಡ್ ಮೇಲಿಂದ ಜಿಗಿದು ಮಹಿಳೆಯನ್ನು ಕಾಶಿನಾಥ ಈರಿಗಾರ ಅವರು ರಕ್ಷಿಸಿದ್ದಾರೆ. ಮಹಿಳೆ ಕೆರೆಗೆ ಬಿದ್ದಿರುವ ವಿಷಯ ಗೊತ್ತಾಗುತ್ತಿದ್ದಂತೆ ಓಡೋಡಿ ಬಂದು ಮಹಿಳೆಯ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:Self Harming : ಮದುವೆಯಾದ ಎರಡೇ ತಿಂಗಳಿಗೆ ತಾಯಿ ಮನೆಯಲ್ಲಿ ನವವಿವಾಹಿತೆ ಆತ್ಮಹತ್ಯೆ!
ಈ ಹಿಂದೆ ಮಾರ್ಕೆಟ್ ಠಾಣೆಯ ಪಿಸಿ ಆಗಿದ್ದಾಗಲೂ ಇದೇ ಕೆರೆಗೆ ಹಾರಿದ್ದ ಇಬ್ಬರನ್ನು ಕಾಶಿನಾಥ ಅವರು ರಕ್ಷಿಸಿದ್ದರು. ಕಾಶಿನಾಥ ಅವರ ಈ ಸಾಹಸದ ಕಾರ್ಯಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2015 ರಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವಿಭಾಗದಲ್ಲಿ ನೇಮಕವಾಗಿರುವ ಕಾಶಿನಾಥ ಅವರು, ಕಳೆದ ಆರು ವರ್ಷಗಳಿಂದ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಶಿನಾಥ ಈರಿಗಾರ ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದವರು