ತುಮಕೂರು: ಜೀವ ಭಯ ಅನ್ನುವುದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇರುತ್ತದೆ. ತುಮಕೂರು ನಗರದ ರಂಗಾಪುರ ಕನಿಕ ಮಿಲ್‌ನ ಗೋಡೆಯೊಳಗೆ ಅರ್ಧ ಗಂಟೆಗಳ ಕಾಲ ಜೀವ ಭಯದಿಂದ ನರಳಾಡುತ್ತಿದ್ದ ಹಾವಿನ ರಕ್ಷಣೆಯಾಗಿದೆ.
ಹಾವಿನ ಸ್ಥಿತಿಯನ್ನು ಕಂಡ ಸ್ಥಳೀಯರು ಮೊದಲು ಕಾರ್ಖಾನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಉರಗ ತಜ್ಞ ದಿಲೀಪ್ ಎಂಬುವರಿಗೆ ಮಾಹಿತಿಯನ್ನು ನೀಡಲಾಗಿದೆ. ಕೆಲ ಸಮಯದಲ್ಲೇ ಸ್ಥಳಕ್ಕೆ ಆಗಮಿಸಿದ ದಿಲೀಪ್ ಅವರು, ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ರಕ್ಷಿಸಿದ ನಾಗರಹಾವನ್ನು ಸುರಕ್ಷಿತವಾಗಿ ಸಮೀಪದ ದೇವರಾಯನ ದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ಆಶ್ರಯದಾತೆ ಈ ಹೆಣ್ಣು ಮಗಳು