ಚಿಕ್ಕಮಗಳೂರು: ನಗರದ ವಸತಿ ಶಾಲೆಯ ಶಿಕ್ಷಕಿ ವಿರುದ್ಧ ವಿದ್ಯಾರ್ಥಿನಿಯರಿಗೆ ಚಿತ್ರಹಿಂಸೆ ನೀಡುತ್ತಿರುವ ಆರೋಪ ಕೇಳಿಬಂದಿದ್ದು, ಶಿಕ್ಷಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ. ನಗರದ (Chikkamagaluru News) ಕಾಫಿ ಗೋಡೌನ್‌ನಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಮಕ್ಕಳು ಹಾಗೂ ಪೋಷಕರು ದೂರು ನೀಡಿದ್ದಾರೆ.
ಶಿಕ್ಷಕಿ ದೀಪಾ ಎಂಬುವವರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯೋಗೀಶ್‌ಗೆ 40 ಮಕ್ಕಳು ದೂರು ನೀಡಿದ್ದಾರೆ. ವಿನಾಕಾರಣ ಮಕ್ಕಳ ಮೇಲೆ ಶಿಕ್ಷಕಿ ಹಲ್ಲೆ ಮಾಡುತ್ತಾರೆ ಎಂದು ಮಕ್ಕಳು ಆರೋಪಿಸಿದ್ದು, ಕಣ್ಣೀರು ಹಾಕಿದ್ದಾರೆ. ಹೀಗಾಗಿ ಶಿಕ್ಷಕಿಯನ್ನು ಅಮಾನತು ಮಾಡುವಂತೆ, ಮೇಲಧಿಕಾರಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪತ್ರ ಬರೆದಿದ್ದಾರೆ.
ಒಂದೇ ಕೊಠಡಿಯಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಾಸ
ವಸತಿ ಶಾಲೆ ನಡೆಸಲು ಕಾಫಿ ಗೋಡೌನ್ ಅನ್ನು ಅಧಿಕಾರಿಗಳು ಬಾಡಿಗೆಗೆ ಪಡೆದಿದ್ದು, ತಿಂಗಳಿಗೆ 1.93 ಲಕ್ಷ ರೂ. ನೀಡಲಾಗುತ್ತದೆ. ಒಂದೇ ಕೊಠಡಿಯಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಸವಾಗಿದ್ದು, ಮೂಲಭೂತ ಸೌಕರ್ಯವಿಲ್ಲದೆ ಮಕ್ಕಳು ಪರದಾಡುತ್ತಿದ್ದು, ಸಾಮಗ್ರಿ ಜತೆ ಚಾಪೆ ಮೇಲೆಯೇ ಮಕ್ಕಳು ಮಲಗುವ ಸ್ಥಿತಿಯಿದೆ.
ಇದನ್ನೂ ಓದಿ | Mysuru News : ಪತ್ನಿ ಜತೆಗೆ ವಿಡಿಯೊ ಕಾಲ್; ಮಾತಲ್ಲಿ ಮೈಮರೆತಾಗ ಬಡಿಯಿತು ರೈಲು
ಗಾಂಜಾ ನಶೆಯಲ್ಲಿ ಎರ‍್ರಾಬಿರ‍್ರಿ ಓಡಿದ ಥಾರ್ ಜೀಪ್; ಬೈಕ್ ಸವಾರ ಸಾವು
ಉಳ್ಳಾಲ (ಮಂಗಳೂರು): ಮಹೀಂದ್ರಾ ಥಾರ್ ಜೀಪ್ (Mahindra Thar Jeep) ಚಾಲಕನ ಅವಾಂತರದಿಂದಾಗಿ ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರರೊಬ್ಬರು (Bike rider dead) ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ (Road Accident). ರಾ.ಹೆದ್ದಾರಿ 66ರ ಕೊಲ್ಯ ಬ್ರಹ್ಮಶ್ರೀ ಮಂದಿರ ಎದುರುಗಡೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಈ ಅವಾಂತರಕ್ಕೆ ಥಾರ್ ಜೀಪ್‌ನಲ್ಲಿದ್ದವರ ಗಾಂಜಾ ನಶೆಯೇ (Ganja Case) ಕಾರಣ ಎಂದು ಆರೋಪಿಸಲಾಗಿದೆ.
ಥಾರ್ ಜೀಪ್ ಮಂಗಳೂರಿನಿಂದ ಕಾಸರಗೋಡು ಕಡೆಗೆ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಅದು ಅತಿವೇಗ ಮತ್ತು ಅಜಾಗರೂಕತೆಯಿಂದ ವೇಗವಾಗಿ ಧಾವಿಸಿ ನಿಯಂತ್ರಣ ತಪ್ಪಿ ಎದುರು ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರಿನ ಚಕ್ರವೇ ಸಿಡಿದು ಹೊರಬಂತು.
ಹಾಗೆ ಕಾರಿನಿಂದ ಸಿಡಿದ ಕಾರು ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯಿತು. ಚಕ್ರದ ಹೊಡೆತಕ್ಕೆ ಒಮ್ಮಿಂದೊಮ್ಮೆಗೇ ಸವಾರ ಕಕ್ಕಾಬಿಕ್ಕಿಯಾದರು. ಆಗ ಬೈಕ್ ಹೋಗಿ ಡಿವೈಡರ್‌ಗೆ ಬಡಿಯಿತು. ಬೈಕ್ ಸವಾರ ಅಲ್ಲೇ ಉರುಳಿಬಿದ್ದ ಪರಿಣಾಮವಾಗಿ ತಲೆ ರಸ್ತೆಗೆ ಬಡಿದು ಪ್ರಾಣ ಕಳೆದುಕೊಂಡಿದ್ದಾರೆ.
ಕೊಲ್ಯ ನಿವಾಸಿ ಸಂತೋಷ್ ಬೆಳ್ಚಾಡ ( 45) ಮೃತರು. ಬಾಳೆಹಣ್ಣು ವ್ಯಾಪಾರಿಯಾಗಿದ್ದ ಅವರು ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.
ಮಂಗಳೂರು ಕಡೆಯಿಂದ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಲ್ಲಿದ್ದ ಜೀಪ್ ಎದುರಿನಲ್ಲಿ ಧರ್ಮಸ್ಥಳದಿಂದ ಕಾಞಂಗಾಡ್‌ಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ಬಲೇನೋ ಕಾರಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ.
ಇದನ್ನೂ ಓದಿ | Death Threat to Modi: ಮೋದಿ, ಯೋಗಿಗೆ ಜೀವ ಬೆದರಿಕೆ ಹಾಕಿದ್ದ ನಾಸಿರ್; ಕ್ಷಮೆ ಕೋರಿದ ಸಹೋದರ ಖಾಜಾ
ಆಯತಪ್ಪಿದ ಕಾರು ಎದುರಿನಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಬೈಕ್ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಬೈಕ್ ಡಿವೈಡರ್ ಗೆ ಬಡಿದ ಪರಿಣಾಮ ಸಂತೋಷ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ತೆರಳುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ವಿವಾಹಿತರಾಗಿದ್ದ ಸಂತೋಷ್ ಹೆತ್ತವರು, ಇಬ್ಬರು ಹೆಣ್ಮಕ್ಕಳು ಹಾಗೂ ಪತ್ನಿ ಇರುವ ಕುಟುಂಬದ ಆಧಾರಸ್ತಂಭವಾಗಿದ್ದರು.