Site icon Vistara News

Malali Masjid: ಮಳಲಿ ಮಸೀದಿಯಲ್ಲಿ ಮಂದಿರ ನಿರ್ಮಾಣ ಸಂಕಲ್ಪ; ಹಿಂದು ಸಂಘಟನೆಗಳಿಂದ ಮಸೀದಿ ಮಣ್ಣು ಸಮರ್ಪಿಸಿ ಗಣಹೋಮ

Resolve to build temple at Malali Masjid Ganahoma by Hindu organizations

ಮಂಗಳೂರು: ಮಂಗಳೂರು ಹೊರವಲಯದಲ್ಲಿ ಇರುವ ಮಳಲಿ ಮಸೀದಿ (Malali Masjid) ಜಾಗದಲ್ಲಿ ಮಂದಿರ ವಿವಾದ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ ಆ ಜಾಗದಲ್ಲಿ ಮಂದಿರ ನಿರ್ಮಾಣ ಮಾಡುವ ಸಂಕಲ್ಪವನ್ನು ಹಿಂದು ಪರ ಸಂಘಟನೆಗಳು ಮಾಡಿವೆ. ಈ ಹಿನ್ನೆಲೆಯಲ್ಲಿ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಗಣಹೋಮ ನಡೆಸಿದ್ದು, ಯಾಗಕ್ಕೆ ಮಸೀದಿ ಜಾಗದ ಮಣ್ಣನ್ನು ಸಮರ್ಪಣೆ ಮಾಡಲಾಗಿದೆ.

ಮಳಲಿ ಮಸೀದಿ ಒಡೆಯುವ ವೇಳೆ ಮಸೀದಿ ಒಳಗಡೆ ಮಂದಿರದ ರಚನೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದು ಪರ ಸಂಘಟನೆಯವರು ಕೋರ್ಟ್‌ ಮೊರೆ ಹೋಗಿದ್ದು, ವಿಚಾರಣೆ ನಡೆಯುತ್ತಿದೆ. ದೇವಸ್ಥಾನದ ಗರ್ಭ ಗುಡಿಯನ್ನು ಹೋಲುವ ರಚನೆ ಕಂಡಿದ್ದರಿಂದ ಈ ಜಾಗ ತಮಗೆ ಸೇರಿದ್ದು ಎಂಬುದು ಈಗ ಹಿಂದುಗಳ ವಾದವಾಗಿದೆ. ಆದರೆ, ತಾವು ಹಲವು ದಶಕಗಳಿಂದ ಈ ಜಾಗದಲ್ಲಿ ಧಾರ್ಮಿಕ ಚಟುವಟಿಕೆಯನ್ನು ಮಾಡಿಕೊಂಡು ಬಂದಿದ್ದೇವೆ. ಇದು ನಮಗೇ ಸೇರಿದ್ದು ಎಂದು ಮುಸ್ಲಿಂ ಸಮುದಾಯದವರು ಪ್ರತಿವಾದವನ್ನು ಮಂಡಿಸಿದ್ದಾರೆ.

ಇದನ್ನೂ ಓದಿ: Chikoo Benefits: ಚಿಕ್ಕು ಚಿಕ್ಕೆಂದು ಮೂಲೆಗೆಸೆಯದಿರಿ! ಚಿಕ್ಕಿನ ಗುಣವ ಬಲ್ಲಿರಾ?

ಈ ನಡುವೆ ಹಿಂದು ಸಂಘಟನೆಗಳವರು ತಾಂಬೂಲ ಪ್ರಶ್ನೆಯ ಮೊರೆ ಹೋಗಿದ್ದರು. ಕಳೆದ ಮೇ ತಿಂಗಳಿನಲ್ಲಿ ಮಂದಿರದಲ್ಲಿ ತಾಂಬೂಲ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ, ಪ್ರಶ್ನೆ ಚಿಂತನೆಯಲ್ಲಿ ಗಣಯಾಗ ನಡೆಸುವಂತೆ ಸಲಹೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಮಳಲಿಯಲ್ಲಿ ಮಂದಿರ ನಿರ್ಮಾಣದ ಸಂಕಲ್ಪ ಮಾಡಿ ಗಣಹೋಮವನ್ನು ನೆರವೇರಿಸಲಾಗಿದೆ.

ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಗಣಹೋಮ ನೆರವೇರಿದ್ದು, ಶಾಸಕ ಭರತ್ ಶೆಟ್ಟಿ, ಹಿಂದು ಸಂಘಟನೆಗಳ ಮುಖಂಡರಾದ ಶರಣ್ ಪಂಪ್‌ವೆಲ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಇದನ್ನೂ ಓದಿ: C.T. Ravi: ಲಿಂಗಾಯತ ಸಮುದಾಯವನ್ನು ಒಡೆಯುವುದು ಕಾಂಗ್ರೆಸ್‌ ಚಾಳಿ: ಪತ್ರಿಕಾ ವರದಿ ಸುಳ್ಳು ಎಂದ ಸಿ.ಟಿ. ರವಿ

ಲೋಕ ಕಲ್ಯಾಣಾರ್ಥ ಗಣಯಾಗ- ಭರತ್‌ ಶೆಟ್ಟಿ

ಲೋಕ ಕಲ್ಯಾಣಾರ್ಥವಾಗಿ ಈ ಗಣಯಾಗ ನಡೆದಿದೆ. ಜತೆಗೆ ತಾಂಬೂಲ ಪ್ರಶ್ನೆ ಚಿಂತನೆಯಲ್ಲಿ ಗಣಯಾಗ ಮಾಡಬೇಕೆಂಬ ಆದೇಶ ಬಂದಿತ್ತು. ಸ್ಥಳದಲ್ಲಿ ಶಾಂತಿ ನೆಲೆಸಬೇಕೆಂಬ ಉದ್ದೇಶದಿಂದ ಗಣಯಾಗ ನಡೆದಿದೆ. ನನ್ನನ್ನು ಹಿಂದು ಸಂಘಟನೆಗಳು ಯಾಗಕ್ಕೆ ಆಹ್ವಾನಿಸಿದ್ದರು. ನಾನು ಯಾಗಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದ್ದೇನೆ. ಯಾಗದ ಬಗ್ಗೆ ಬೇರೆ ವಿಚಾರಗಳು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

Exit mobile version