Site icon Vistara News

D.V.Shailendra Kumar No more: ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ನಿಧನ

#image_title

ಬೆಂಗಳೂರು: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್‌ (72) ಇಹಲೋಕ (D.V.Shailendra Kumar No more) ತ್ಯಜಿಸಿದ್ದಾರೆ. ಮೊಟ್ಟ ಮೊದಲಿಗೆ ತಮ್ಮ ಆಸ್ತಿ ವಿವರ ಬಹಿರಂಗಪಡಿಸಿ ಎಲ್ಲರ ಗಮನವನ್ನು ಸೆಳೆದಿದ್ದ ಶೈಲೇಂದ್ರ ಕುಮಾರ್‌, ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದರು. ಮಾತ್ರವಲ್ಲದೆ, ಬಳ್ಳಾರಿಯಿಂದ ಅದಿರು ರಫ್ತು ನಿಷೇಧಿಸಲು ನಿರ್ದೇಶನ ನೀಡುವುದರ ಜತೆಗೆ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಹಲವು ಮಹತ್ವದ ತೀರ್ಪು ನೀಡಿದ್ದರು.

ಸೆಪ್ಟೆಂಬರ್‌ 5, 1951ರಲ್ಲಿ ಜನಿಸಿದ ಡಿ.ವಿ.ಶೈಲೇಂದ್ರ ಕುಮಾರ್‌ ಅವರು 1976ರಿಂದ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಮದ್ರಾಸ್‌ ಮತ್ತು ಕರ್ನಾಟಕ ಹೈಕೋರ್ಟ್‌ಗಳಲ್ಲಿ ಅಭ್ಯಾಸ ಮಾಡಿದ ಅವರು, 2000ರಂದು ಕರ್ನಾಟಕದ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದರು. ಬಳಿಕ 2002ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

ನ್ಯಾಯಾಂಗದಲ್ಲಿ ಪಾರದರ್ಶಕತೆಗಾಗಿ ದಿಟ್ಟತನವನ್ನು ತೋರಿದ್ದರು. ನ್ಯಾಯಧೀಶರು ಯಾವುದಕ್ಕೂ ಹೆದರಬಾರದು, ಯಾವುದನ್ನು ಮುಚ್ಚಿಡಬಾರದು ಎನ್ನುತ್ತಿದ್ದರು. ಯುವಪೀಳಿಗೆಗೆ ಮಾದರಿ ಆಗಿದ್ದ ಶೈಲೇಂದ್ರ ಕುಮಾರ್‌ ಅವರು ಆಗೀನ ಕರ್ನಾಟಕ ಹೈಕೋರ್ಟ್‌ನ ಸಿಜೆ ಆಗಿದ್ದ ಪಿ.ಡಿ ದಿನಕರನ್‌ ಅವರ ಆಡಳಿತ್ಮಾಕ ತೀರ್ಮಾನಗಳ ವಿರುದ್ಧ ತಿರುಗಿ ಬಿದ್ದಿದ್ದರು. ಹೈಕೋರ್ಟ್‌ ಪೀಠಗಳ ನ್ಯಾಯಮೂರ್ತಿಗಳ ಕೇಸ್‌ ಹಂಚಿಕೆಯಲ್ಲಿ ಏಕವೃತ್ತಿಯನ್ನು ಪಾಲಿಸಬೇಕೆಂದು ತಾಕೀತು ಮಾಡಿದ್ದರು. ಮಾತ್ರವಲ್ಲ ಜಡ್ಜ್‌ಗಳು ತಮ್ಮ ಆಸ್ತಿಯನ್ನು ಘೋಷಿಸಬೇಕೆಂದು ಎಂದು ಹೇಳಿದ್ದು ಮಾತ್ರವಲ್ಲ ಖುದ್ದು ಶೈಲೇಂದ್ರ ಕುಮಾರ್‌ ತಮ್ಮ ಆಸ್ತಿ ಘೋಷಣೆ ಮಾಡಿದ್ದರು.

ಇದನ್ನೂ ಓದಿ: Lokayukta Raid: ಮಾಡಾಳು ಪ್ರಶಾಂತ್‌ ಬೆಡ್‌ ರೂಮಿನಲ್ಲಿತ್ತು ಕಂತೆ ಕಂತೆ ಹಣ; 8 ಗುಟ್ಕಾ ಬ್ಯಾಗ್‌ನಲ್ಲಿ ಹೊತ್ತು ಹೊರಟ ಲೋಕಾಯುಕ್ತ ಟೀಂ

ರಾಜಕಾರಣ ದಂಧೆ

ರಾಜಕಾರಣದಲ್ಲಿ ಸ್ವಾರ್ಥ, ಭ್ರಷ್ಟಾಚಾರ, ದ್ವೇಷವೇ ತುಳುಕಾಡುತ್ತಿದ್ದು, ದಂಧೆಯಂತಾಗಿದ್ದು, ಸಮಾಜಸೇವೆ ಮರೀಚಿಕೆ ಆಗಿದೆ ಎಂದು ಶೈಲೇಂದ್ರ ಕುಮಾರ್‌ ಅಸಮಾಧಾನ ಹೊರಹಾಕಿದ್ದರು. ಚುನಾವಣೆಗೂ ಮುನ್ನ ಸಮಾಜ ಸೇವೆಯೇ ನಮ್ಮ‌ ಗುರಿ ಎನ್ನುವವರು ಗೆದ್ದ ನಂತರ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ. ಹೀಗಾಗಿ ಪ್ರತಿಯೊಬ್ಬರು ಚುನಾವಣೆಯಲ್ಲಿ ಭಾಗಿಯಾಗಿ ಸಮರ್ಥ ರಾಜಕಾರಣಿಯನ್ನು ಆಯ್ಕೆ ಮಾಡಬೇಕು ಎಂದು ಜನತೆಗೆ ಸಲಹೆಯನ್ನು ನೀಡಿದ್ದರು.

ಬೆಂಗಳೂರು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version