Site icon Vistara News

ಸೇವಾವಧಿಯಲ್ಲಿ ₹1.14 ಕೋಟಿ ಅಕ್ರಮ ಆಸ್ತಿ ಗಳಿಕೆ; ನಿವೃತ್ತ ಆರ್‌ಟಿಒಗೆ 4 ವರ್ಷ ಜೈಲು, ₹63 ಲಕ್ಷ ದಂಡ

ಅಕ್ರಮ ಆಸ್ತಿ

ಬೆಳಗಾವಿ: ಸೇವಾ ಅವಧಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 63 ಲಕ್ಷ ರೂಪಾಯಿ ದಂಡ ವಿಧಿಸಿ ಬೆಳಗಾವಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

‌ನಗರದ ಆಂಜನೇಯ ನಗರದ ನಿವಾಸಿ, ಕೋಲಾರ ಜಿಲ್ಲೆ ಕೆಜಿಎಫ್‌ ಮೂಲದ ಶಾಂತಕುಮಾರ ಶಿಕ್ಷೆಗೊಳಪಟ್ಟವರು. ಇವರು ಬೀದರ್‌ ಜಿಲ್ಲೆಯ ಹುಮನಾಬಾದ್ ಆರ್‌ಟಿಒ ಆಗಿದ್ದಾಗ ಭ್ರಷ್ಟಾಚಾರ ಎಸಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದರು. ಈ ಸಂಬಂಧ ಗುಪ್ತ ಮಾಹಿತಿ ಕಲೆ ಹಾಕಿದ್ದ ಲೋಕಾಯುಕ್ತ ಎಸ್‌ಪಿ ಆರ್.ಕೆ. ಪಾಟೀಲ್‌, ಶಾಂತಕುಮಾರ ಮನೆ ಮೇಲೆ ದಾಳಿ ಮಾಡಿ ಅಕ್ರಮ ಆಸ್ತಿ ಗಳಿಕೆ ಬಗ್ಗೆ ಪತ್ತೆ ಹಚ್ಚಿದ್ದರು.

2010ರ ಮೇ 3 ರಂದು ಪಿ. ಶಾಂತಕುಮಾರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬಳಿಕ ಬೆಳಗಾವಿ ಲೋಕಾಯುಕ್ತ ಎಸ್‌ಪಿ ಆರ್. ಬಿ. ಹವಾಲ್ದಾರ್, 1.14 ಕೋಟಿ ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಬಗ್ಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಮೋಹನಪ್ರಭು, ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟಿಸಿದ್ದಾರೆ. ದಂಡ ಪಾವತಿಸದಿದ್ದರೆ ಆರೋಪಿ ಅಥವಾ ಪತ್ನಿಯ ಚರ ಮತ್ತು ಚಿರಾಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶ ನ್ಯಾಯಾಲಯ ಆದೇಶ ನೀಡಿದೆ.

ಇದನ್ನೂ ಓದಿ | Shivamogga terror | ಸಾವರ್ಕರ್‌-ಟಿಪ್ಪು ಗಲಾಟೆಗೂ ಉಗ್ರ ಜಾಲ ಪತ್ತೆಗೂ ಲಿಂಕ್‌, ಜಬಿ ವಿಚಾರಣೆ ವೇಳೆ ಸಿಕ್ತು ಸುಳಿವು

Exit mobile version