ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಮಾಜಿ ಸಚಿವ H.D. ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಪರ ಮತ ಚಲಾಯಿಸಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ತಮ್ಮ ನಿವಾಸದ ಎದುರು ಪ್ರತಿಭಟನೆ ನಡೆಸಿದಾಗ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ದಾಳಿ ಮಾಡಿದ್ದ ಶ್ರೀನಿವಾಸ್ ಮಾತಿಗೆ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಹಾಸನದಲ್ಲಿ ಈ ಕುರಿತು ಮಾತನಾಡಿದ ರೇವಣ್ಣ, ಅವಕ್ಕೆಲ್ಲಾ ನಾನು ಮಾತಾಡಲ್ಲ. ಅವರು ಎಷ್ಟು ದುಡ್ಡು ತೆಗೆದುಕೊಂಡು ಓಟ್ ಹಾಕಿದ್ದಾರೆ ಎಂದು ಮಂತ್ರಿಯೊಬ್ಬರು ಹೇಳಿದ್ದಾರೆ. ಅವರು ಬಿಜೆಪಿಗೇ ಓಟ್ ಹಾಕಿದ್ದಾರೆ ಎಂದು ನನಗೆ ಗೊತ್ತಿದೆ.
ಇದನ್ನೂ ಓದಿ | ಎಚ್ಡಿಕೆಗೆ ತಾಕತ್ತಿದ್ರೆ ಗುಬ್ಬಿಯಲ್ಲಿ ಗೆದ್ದು ತೋರಿಸಲಿ : ಶಾಸಕ ಎಸ್.ಆರ್.ಶ್ರೀನಿವಾಸ್ ಓಪನ್ ಚಾಲೆಂಜ್
ಓಟ್ ಹಾಕಿದ ಮೇಲೆ, ನಾನು ಯಾರಿಗೂ ಓಟ್ ಹಾಕಿಲ್ಲ ಎಂದು ತೋರಿಸಿದ್ರು. ಓಟ್ ಹಾಕಿದ ಜಾಗದಲ್ಲಿ ಅವರ ಹೆಬ್ಬೆಟ್ಟು ಮುಚ್ಕೊಂಡಿದ್ರು. ಅದನ್ನ ಅಲ್ಲಿ ತೆಗೆದು ನೋಡೋದಕ್ಕೆ ಹೋಗ್ಲಾ? ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತಾಡಲ್ಲ. ದೇವರೇ ಶಿಕ್ಷೆ ಕೊಡೋ ಕಾಲ ಬರುತ್ತದೆ. ಈ ಕುಮಾರಸ್ವಾಮಿ ಎಲ್ಲೋ ಇದ್ದವರನ್ನು ಕರೆದುಕೊಂಡು ಬಂದು ಎಂಎಲ್‌ಎ ಮಾಡ್ತಾರೆ. ಅಂತಹವರೇ ಕಡೆಗೆ ಬೆನ್ನಿಗೆ ಚೂರಿ ಹಾಕಿ ಹೋಗ್ತಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡರು ಯಡಿಯೂರಪ್ಪ ಅವರೊಂದಿಗೆ ಮಾತಾಡಿಕೊಂಡು ಕ್ಯಾಂಡಿಟೇಟ್ ಹಾಕಿದ್ದಾರೆ. ಅವರೆಲ್ಲಾ ಮಾತಾಡಿದ ಮೇಲೆಯೇ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದ್ದಾರೆ. ಜೆಡಿಎಸ್ ಪಕ್ಷವನ್ನು ಸೋಲಿಸೋದಕ್ಕೆ ಸೋಲಿಸೋದಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೀಗೆ ಮಾಡಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪನವರೇ ಹೇಳಿದ್ದಾರೆ ಎಂದು ರೇವಣ್ಣ ತಿಳಿಸಿದರು.
ಇದನ್ನೂ ಓದಿ | ಕಾಂಗ್ರೆಸಲ್ಲಿ ಮೇಡಮ್ ಮಾತ್‌ಗೂ ಬೆಲೆ ಇಲ್ಲಾ ಅಂದ್ರೆ ನಾವೇನ್ ಮಾಡನ?: HD ರೇವಣ್ಣ ಪ್ರಶ್ನೆ