ಬೆಂಗಳೂರು: ರೈಸ್ ಪುಲ್ಲಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಕಾನ್ಸ್‌ಟೇಬಲ್ ಸೇರಿ ಮೂವರು ಆರೋಪಿಗಳನ್ನು ಪೊಲೀಸರು (Rice pulling Scam) ಬಂಧಿಸಿದ್ದಾರೆ. ಸಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ನಟೇಶ್ ಹಾಗೂ ಆತನ ಸಹಚರರಾದ ಸೋಮಶೇಖರ್, ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ನಟೇಶ್ ಕರ್ತವ್ಯದಲ್ಲಿದ್ದಾಗಲೇ ರೈಸ್ ಪುಲ್ಲಿಂಗ್ ಚಟಕ್ಕೆ ಬಿದ್ದಿದ್ದ. ಅದರಲ್ಲಿ ಆದ ನಷ್ಟವನ್ನು ತಪ್ಪಿಸಲು ಮತ್ತೆ ದಂಧೆಯಲ್ಲಿರುವ ವ್ಯಕ್ತಿಗಳ ಜತೆ ಸೇರಿ ರೈಸ್ ಪುಲ್ಲಿಂಗ್ ಮುಂದುವರಿಸಿದ್ದ ಎಂದು ತಿಳಿದು ಬಂದಿದೆ. 2007ರಲ್ಲಿ ಕಾನ್ಸ್‌ಟೇಬಲ್ ವೃತ್ತಿಗೆ ನಟೇಶ್ ರಾಜೀನಾಮೆ ನೀಡಿದ್ದ.
ಬಳಿಕ ರೇಡಿಯಂಟ್ ರೇಸ್ ಎಂಬ ಕಂಪನಿ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಬಂಧಿಯಾಗಿರುವ ಮೂವರಿಂದ 1.3 ಕೆ.ಜಿ ಚಿನ್ನ, 28 ಲಕ್ಷ ರೂ. ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ರೈಸ್ ಪುಲ್ಲಿಂಗ್ ದಂಧೆಯಲ್ಲಿ ತೊಡಗುವವರು ಸಿಡಿಲು ಬಡಿದ ತ್ರಾಮದ ಚೊಂಬನ್ನು ಪಡೆದುಕೊಂಡು ಅದರಿಂದ ಅಕ್ಕಿಕಾಳು ಸೆಳೆಯುವ ಶಕ್ತಿ ಇದೆ. ರೇಡಿಯೇಷನ್ ಪವರ್ ಇರುವ ಇದನ್ನು ಮನೆಯಲ್ಲಿಟ್ಟಕೊಂಡರೆ ಅದೃಷ್ಟ ಎಂದು ನಂಬಿಸುತ್ತಾರೆ.
ಇದನ್ನೂ ಓದಿ: Kukke Subramanya Temple: ಕುಕ್ಕೆ ಸುಬ್ರಹ್ಮಣ್ಯ ಇತಿಹಾಸದಲ್ಲೆ ದಾಖಲೆ ಆದಾಯ; 123 ಕೋಟಿ ರೂ. ಸಂಗ್ರಹ
ಈ ಮೂಢನಂಬಿಕೆಗೆ ಬೀಳುವ ಜನರು, ವ್ಯಾಪಾರಿಗಳಿಂದ ಲಕ್ಷ ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡುತ್ತಾರೆ. ಇಂತಹ ಜಾಲದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದ ವಂಚಕರನ್ನು ಬಂಧಿಸಲಾಗಿದೆ.