Site icon Vistara News

Ripponpet News: ನದಿ ನೀರಿಗೆ ಮೈಲುತುತ್ತು ಬೆರೆಸಿದ ಕಿಡಿಗೇಡಿಗಳು: ಜಲಚರಗಳ ಮಾರಣ ಹೋಮ

Death of fish ripponpet Kumadvati River

#image_title

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಯಲ್ಲಿ (Kumadvati River) ಮೀನು ಹಿಡಿಯುವ ಉದ್ದೇಶದಿಂದ ಕಿಡಿಗೇಡಿಗಳು ಮೈಲುತುತ್ತು ಬೆರಿಸಿದ ಹಿನ್ನೆಲೆಯಲ್ಲಿ ಮೀನುಗಳು ಸೇರಿದಂತೆ ಸಾವಿರಾರು ಜಲಚರ ಪ್ರಾಣಿ ಪ್ರಭೇದಗಳ ಮಾರಣ ಹೋಮವಾಗಿದೆ.

ಕುಮದ್ವತಿ ನದಿಯಲ್ಲಿ ಬೇಸಿಗೆ ಕಾರಣದಿಂದ ನೀರು ಇಂಗಿ ಹೋಗಿದ್ದು, ಅಲ್ಲಲ್ಲಿ ಕೆಲ ಹೊಂಡದಲ್ಲಿ ಪ್ರಾಣಿ ಪ್ರಭೇದಗಳು ಜೀವಿಸುತ್ತವೆ. ಇದನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ವಿಷಯುಕ್ತ “ಮೈಲುತುತ್ತು”ವನ್ನು ಆ ನೀರಿಗೆ ಬೆರೆಸಿ ಲಕ್ಷಾಂತರ ಪ್ರಾಣಿ ಸಂಕುಲಗಳ ಸಾವಿಗೆ ಕಾರಣವಾಗಿದ್ದಾರೆ.

ವಿಷ ಬೆರೆಸಿದ್ದರಿಂದ ಮೀನು, ಕಪ್ಪೆ ಹಾಗೂ ಇನ್ನಿತರ ಜೀವಿಗಳು ನದಿಯ ದಂಡೆಯ ಮೇಲೆ ಬಿದ್ದಿವೆ. ಇದನ್ನು ತಿನ್ನುವ ಹಕ್ಕಿಗಳು ಸಹ ಸಾಯುವ ಸಾಧ್ಯತೆ ಇರುತ್ತದೆ. ಜಾನುವಾರುಗಳು ಕುಡಿಯಲು ಇದೇ ನೀರು ಬಳಸುವುದರಿಂದ ಅವುಗಳ ಜೀವಕ್ಕೂ ಕಂಠಕವಾಗಿದೆ.

ಇದನ್ನೂ ಓದಿ: Junior NTR: ರಾಮ್‌ಚರಣ್‌ ಬರ್ತ್‌ಡೇ ಪಾರ್ಟಿಗೆ ಜ್ಯೂ. ಎನ್‌ಟಿಆರ್‌ ಗೈರು; ಇಬ್ಬರ ನಡುವೆ ಬಿರುಕು ಮೂಡಿದ್ಯಾಕೆ?

ಈ ಬಗ್ಗೆ ಅಮೃತ ಗ್ರಾಪಂ ಪಿಡಿಒ ಅವರಿಗೆ ವಿಷಯ ತಿಳಿಸಲಾಗಿದ್ದು, ಪರಿಶೀಲನೆ ನಡೆಸಿದಾಗ ಗಮನಕ್ಕೆ ಬಂದಿದೆ. ಅಲ್ಲದೆ, ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Exit mobile version