Site icon Vistara News

Ripponpete News | ಮಾಂಸಕ್ಕಾಗಿ ಜಿಂಕೆ ಮರಿ ಬೇಟೆ, ಒಬ್ಬನ ಸೆರೆ; ಮತ್ತೊಬ್ಬ ಪರಾರಿ

Ripponpete Deer cub hunting Forest Officer

ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ (Ripponpete News) ಸಮೀಪದ ಬೆನವಳ್ಳಿ ಗ್ರಾಮದಲ್ಲಿ ಜಿಂಕೆ ಬೇಟೆಯಾಡಿ ಮಾಂಸವನ್ನು ಬಳಸಿಕೊಳ್ಳುತ್ತಿದ್ದ ಆರೋಪದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಇನ್ನೊಬ್ಬ ಪರಾರಿಯಾಗಿದ್ದಾನೆ.

ಬೆನವಳ್ಳಿ ಗ್ರಾಮದ ಮನೋಹರ್ (34) ಬಂಧಿತ. ಇನ್ನೊಬ್ಬ ಆರೋಪಿ ಬೆನವಳ್ಳಿ ಗ್ರಾಮದ ವಿನಯ್ (26) ಪರಾರಿಯಾಗಿದ್ದಾನೆ.

ಇದನ್ನೂ ಓದಿ | Moral education : ಮುಂದಿನ ವರ್ಷದಿಂದಲೇ ಮೌಲ್ಯ ಶಿಕ್ಷಣ ಜಾರಿ; ಅಧ್ಯಯನಕ್ಕೆ ಉನ್ನತ ಸಮಿತಿ ರಚನೆ

ಮಾಂಸ ತಿನ್ನುವ ಉದ್ದೇಶದಿಂದ ಜಿಂಕೆಯನ್ನು ಬೇಟೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಬೆನವಳ್ಳಿ ಗ್ರಾಮದ ಸ.ನಂ. 10/06 ರಲ್ಲಿ ಬೇಟೆಯಾಡಿದ ಜಿಂಕೆ ಮರಿಯ ಮಾಂಸ, ತಲೆ, ಕಾಲು, ಚರ್ಮ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಮನೋಹರ್‌ನನ್ನು ವಶಕ್ಕೆ ಪಡೆದಿದ್ದು, ವಿನಯ್ ಬಂಧನಕ್ಕೆ ಬಲೆ ಬೀಸಲಾಗಿದೆ.

ಎಸಿಎಫ್‌ ಸುಬ್ರಹ್ಮಣ್ಯ ಮಾರ್ಗದರ್ಶನದಲ್ಲಿ ರಿಪ್ಪನ್ ಪೇಟೆ ವಲಯ ಅರಣ್ಯ ಅಧಿಕಾರಿ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಉಪ ವಲಯಾಧಿಕಾರಿ ಹರೀಶ್, ಬೀಟ್ ಫಾರೆಸ್ಟರ್ ಅನಿಲ್ ರಾಥೋಡ್, ಅರಣ್ಯ ವೀಕ್ಷಕ ಹಾಲಪ್ಪ ಮತ್ತು ವಾಹನ ಚಾಲಕ ಯೋಗೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ | UN Report | 2050ರ ಹೊತ್ತಿಗೆ ಭಾರತದ 3700 ಡ್ಯಾಮ್‌ಗಳ ನೀರಿನ ಸಂಗ್ರಹ ಸಾಮರ್ಥ್ಯ ಶೇ.26ರಷ್ಟು ಕುಸಿಯಲಿದೆ!

Exit mobile version