Site icon Vistara News

Ripponpete News: ನವೀಕರಣಗೊಳ್ಳುತ್ತಿದ್ದ ದೇವಸ್ಥಾನದ ಕಟ್ಟಡ ಧ್ವಂಸ; ಪ್ರಕರಣ ದಾಖಲು

Ripponpete Temple building demolished

#image_title

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ (Ripponpete News) ಸಮೀಪದ ಮೂಗುಡ್ತಿ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಂಬಂಧಿಸಿದ ನವೀಕರಣಗೊಳ್ಳುತಿದ್ದ ದೇವಸ್ಥಾನದ ಕಟ್ಟಡವನ್ನು ಕೆಲವು ವ್ಯಕ್ತಿಗಳು ಧ್ವಂಸ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಗುಡ್ತಿ ಗ್ರಾಮದ ಪವನ್ ಕುಮಾರ್ ಎಂಬುವವರು ತಮ್ಮ ಜಾಗದಲ್ಲಿ ಮನೆ ದೇವರಾದ ಪಂಜುರ್ಲಿ ಹಾಯ್ ಗುಳಿ ಮತ್ತು ಮರ್ಲುಚಿಕ್ಕು ದೇವರುಗಳನ್ನು ಹಲವಾರು ವರ್ಷಗಳಿಂದ ಆರಾಧನೆ ಮಾಡಿಕೊಂಡು ಬರುತ್ತಿದ್ದು, ದೇವರ ಅಣತಿಯಂತೆ ನೂತನ ಕಟ್ಟಡವನ್ನು ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಲಾಗುತಿತ್ತು.

#image_title

ಇದನ್ನೂ ಓದಿ | BBC Documentary on Modi: ಬಿಬಿಸಿ ಸಾಕ್ಷ್ಯ ಚಿತ್ರ ನಿಷೇಧ ಪ್ರಶ್ನಿಸಿ ಪಿಐಎಲ್, ಫೆ.6ಕ್ಕೆ ವಿಚಾರಣೆ ಎಂದ ಸುಪ್ರೀಂ ಕೋರ್ಟ್

ಸದರಿ ಜಾಗದ ವಿಚಾರ ನ್ಯಾಯಲಯದ ಮೆಟ್ಟಿಲೇರಿ ಪವನ್ ಕುಮಾರ್ ಅವರ ಪರವಾಗಿ ನ್ಯಾಯಾಲಯದಿಂದ 23/2018 ಕಾಯಂ ಪ್ರತಿಬಂಧಾಕಾಜ್ಞೆ ಇರುತ್ತದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಕಾಮಗಾರಿಯನ್ನು ಕಳೆದ ಮೂರು ತಿಂಗಳಿಂದ ನಡೆಸಲಾಗುತಿತ್ತು.

ಇದನ್ನೂ ಓದಿ | Thalapathy 67: ದಳಪತಿ 67 ಸಿನಿಮಾ ಬಗ್ಗೆ ಸುಳಿವು ನೀಡಿದ ರಕ್ಷಿತ್‌ ಶೆಟ್ಟಿ: ಟ್ವೀಟ್‌ ಮೂಲಕ ಸ್ಪಷ್ಟನೆ

#image_title

ಶನಿವಾರ (ಜ.೨೮) ಸಂಜೆ ಜಾಗದ ವ್ಯಾಜ್ಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಏಕಾಏಕಿ ನ್ಯಾಯಾಲಯದ ಕಾಯಂ ಪ್ರತಿಬಂಧಾಕಾಜ್ಞೆ ಇರುವ ಸ್ಥಳಕ್ಕೆ ನುಗ್ಗಿ ದೇವಸ್ಥಾನದ ಕಟ್ಟಡವನ್ನು ನೆಲಸಮಗೊಳಿಸಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | John Abraham : ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ಜಾನ್ ಅಬ್ರಾಹಂ; ಕಾರಣವೇನು ಗೊತ್ತಾ?

Exit mobile version