ಬೆಂಗಳೂರು: ರಾತ್ರಿ 10ರಿಂದ ಬೆಳಗ್ಗೆ ಆರು ಗಂಟೆ ವರೆಗೆ ಯಾವುದೇ ಲೌಡ್ ಸ್ಪೀಕರ್ ಬಳಕೆಯನ್ನು ನಿಷೇಧಿಸಿದ ರಾಜ್ಯ ಸರಕಾರದ ಕ್ರಮವನ್ನು ಋಷಿ ಕುಮಾರ ಸ್ವಾಮೀಜಿ ಸ್ವಾಗತಿಸಿದ್ದಾರೆ.
ಸರಕಾರ ಪ್ರಕಟಿಸಿದಂತೆ ಈ ಅವಧಿಯಲ್ಲಿ ದೊಡ್ಡ ಸ್ವರದಲ್ಲಿ ಕೂಗುವ ಲೌಡ್ ಸ್ಪೀಕರ್‌ಗಳನ್ನು ತೆಗೆಸುವ ಕೆಲಸವನ್ನು ಮಾಡಬೇಕು. ಸರಕಾರ ಇದಕ್ಕೆ 15 ದಿನಗಳ ಗಡುವನ್ನು ನೀಡಿದೆ. ಈ ಗಡುವು ಮೀರಿದರೆ ಮತ್ತೆ ಕಾಳಿ ಕೂಗು ಆರಂಭವಾಗಲಿದೆ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಒಂದೊಮ್ಮೆ 15 ದಿನಗಳ ಬಳಿಕವೂ ಆಜಾನ್ ಸದ್ದು ಕೇಳಿಬಂದರೆ ಮತ್ತೆ ಅಭಿಯಾನ ಮುಂದುವರಿಸುವುದಾಗಿ ಅವರು ಹೇಳಿದರು.
ಇದನ್ನೂ ಓದಿ | ಶಬ್ದಮಾಲಿನ್ಯ ಮಾಡುವವರ ಮೇಲೆ ಕೇಸ್ ಹಾಕಿ: ಅಧಿಕಾರಿಗಳಿಗೆ ಡಿಜಿ-ಐಜಿಪಿ ಖಡಕ್ ಸೂಚನೆ
ಲೌಡ್ ಸ್ಪೀಕರ್ ಮೂಲಕ ಆಜಾನ್ ಕೂಗುವುದರ ವಿರುದ್ಧ ಅಭಿಯಾನ ಸಂಘಟಿಸಿದ್ದ ಕಾಳಿ ಸ್ವಾಮೀಜಿ ಬೆಳಗ್ಗೆ ಐದರಿಂದ ರಾಮ ಜಪ ಮಾಡುವ ಮೂಲಕ ತಿರುಗೇಟು ನೀಡಿದ್ದರು. ಅಭಿಯಾನದ ಬಳಿಕ ರಾಜ್ಯಾದ್ಯಂತ ಆಜಾನ್ ವಿರುದ್ಧ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಕರ್ನಾಟದಲ್ಲಿ 15 ದಿನದಲ್ಲಿ ಧ್ವನಿವರ್ಧಕ ತೆರವುಗೊಳಿಸುವುದಾಗಿ ಹೇಳಿರುವ ಸರಕಾರ, ಈ ಸಂಬಂಧ ಸುತ್ತೊಲೆಯನ್ನು ಹೊರಡಿಸಿದೆ.
ಮಹಾರಾಷ್ಟ್ರದಲ್ಲಿ ಕೂಡ ಧ್ವನಿವರ್ಧಕ ವಿರುದ್ದ ಹೋರಾಟ ಮುಂದುವರಿದಿದ್ದು, ಮಹಾರಾಷ್ಟ್ರದ ನವನಿರ್ಮಾಣ ಸೇನೆ ಧ್ವನಿವರ್ಧಕ ತೆರವುಗೊಳಿಸಲು ಸರ್ಕಾರಕ್ಕೆ ಗಡುವು ನೀಡಿತ್ತು.
ಇದನ್ನೂ ಓದಿ |ಆಜಾನ್ V/s ಭಜನೆ: 15 ದಿನ ಮೊದಲು ಅನುಮತಿ ಪಡೆಯದಿದ್ದರೆ ಧ್ವನಿವರ್ಧಕ ಎತ್ತಂಗಡಿ