Site icon Vistara News

Road Accident | ವೇಗವಾಗಿ ಬಂದ ಸ್ಕೂಟರ್‌ ಡಿಕ್ಕಿ; ಸ್ಥಳದಲ್ಲೇ 5 ವರ್ಷದ ಬಾಲಕಿ ಸಾವು

madikeri accident

ಮಡಿಕೇರಿ: ತಾಲೂಕಿನ ಮೇಕೇರಿ ಗ್ರಾಮದಲ್ಲಿ ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿ (Road Accident) ೫ ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದೆ. ಸ್ಕೂಟರ್ ಅಪಘಾತದ ವಿಡಿಯೊ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೂರ್ನಾಡು ಕಡೆಯಿಂದ ವೇಗವಾಗಿ ಬರುತಿದ್ದ ಸ್ಕೂಟಿಯು ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಅಸ್ಸಾಂ ಮೂಲದ 5 ವರ್ಷದ ಮಗು ಇಳಿಜಾ ಕುಟುಮ್ ಮೃತಪಟ್ಟಿದೆ. ಈಕೆ ಅಸ್ಮಾ ಕುತುಮ್, ಇದ್ರಿಸ್ ಅಲಿ ದಂಪತಿಯ ಪುತ್ರಿಯಾಗಿದ್ದಾಳೆ.

ರಸ್ತೆ ಬದಿ ಆಟವಾಡುತ್ತಿದ್ದ ಇಳಿಜಾ ಸ್ಕೂಟರ್ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಆದರೆ, ರಸ್ತೆ ಬದಿಯೇ ಡಿಕ್ಕಿ ಹೊಡೆದಿದೆಯೇ? ಅಥವಾ ರಸ್ತೆಗೆ ಅಡ್ಡಲಾಗಿ ಇಳಿಜಾ ಬಂದಿದ್ದಾಳೆಯೇ ಎಂಬುದು ತಿಳಿದು ಬಂದಿಲ್ಲ. ಸ್ಕೂಟರ್ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident | ಸಾಗರ ಬಳಿ ಭೀಕರ ಅಪಘಾತ; ರಸ್ತೆಯಲ್ಲಿ ಹೋಗುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಹರಿದ ಜಲ್ಲಿ ಲಾರಿ

Exit mobile version