Site icon Vistara News

Road Accident : ಚಲಿಸುತ್ತಿದ್ದ ಲಾರಿ ಟಯರ್‌ ಬ್ಲಾಸ್ಟ್‌ ಆಗಿ ಇನ್ನೊಂದು ಲಾರಿಗೆ ಡಿಕ್ಕಿ; ಒಬ್ಬ ಚಾಲಕ ಸಾವು, ಇನ್ನೊಬ್ಬ ಗಂಭೀರ

lorry accident at babaleshwara

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಕ್ರಾಸ್ ಬಳಿ ಚಲಿಸುತ್ತಿದ್ದ ಲಾರಿಯ ಟಯರ್ ಬ್ಲಾಸ್ಟ್ ಆಗಿ ಎರಡು ಲಾರಿಗಳ ಮಧ್ಯೆ ಡಿಕ್ಕಿ (Road Accident) ಸಂಭವಿಸಿದ್ದು, ಒಬ್ಬ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೊಂದು ಲಾರಿಯ ಚಾಲಕನಿಗೆ ಗಂಭೀರ ಗಾಯಗಳಾಗಿವೆ.

ರಾಜಸ್ಥಾನ ಮೂಲದ ಪ್ರಭುಲಾಲ್ ಗುಜ್ಜಲ್ ಮೃತ ದುರ್ದೈವಿ. ಇನ್ನೊಂದು ಲಾರಿಯ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಅವರ ಬಗ್ಗೆ ವಿವರಗಳು ತಿಳಿದುಬಂದಿಲ್ಲ.

ವೇಗವಾಗಿದ್ದಾಗ ಟಯರ್‌ ಬ್ಲಾಸ್ಟ್‌ ಆಗಿದ್ದ ಕಾರಣ ನಿಯಂತ್ರಣಕ್ಕೆ ಸಿಗಲಿಲ್ಲ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ | Accident | ಅಪರಿಚಿತ ವಾಹನ ಡಿಕ್ಕಿ, ಬೈಕ್‌ ಸವಾರ ಮೃತ್ಯು

Exit mobile version