Site icon Vistara News

Road Accident | ಚಿಕ್ಕಬಳ್ಳಾಪುರ ಹೆದ್ದಾರಿಯಲ್ಲಿ ಸರಣಿ ಅಪಘಾತ; ಟಾಟಾ ಏಸ್‌ ಚಾಲಕನ ಸ್ಥಿತಿ ಗಂಭೀರ

road accident

ಚಿಕ್ಕಬಳ್ಳಾಪುರ: ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿ ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಕಂಟೈನರ್ ಲಾರಿ ಚಾಲಕ ಅಜಾಗರೂಕತೆಯಿಂದ ಸರಣಿ ಅಪಘಾತ (Road Accident) ಸಂಭವಿಸಿದೆ.

ಹಿಂದೆ ಬರುತ್ತಿದ್ದ ಕಂಟೈನರ್ ಲಾರಿ, ಟಾಟಾ ಏಸ್, ಕಾರು, ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಸೇರಿದಂತೆ ಐದು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಇದರಿಂದ ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಮತ್ತೊಂದೆಡೆ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಮುಂದಿನ ಲಾರಿಗೆ ಡಿಕ್ಕಿ ಹೊಡೆದ ಕಾರಣ ಅದರಲ್ಲಿದ್ದ ಚಾಲಕನಿಗೆ ಸ್ಟೇರಿಂಗ್ ಹೊಟ್ಟೆಗೆ ತಗುಲಿದೆ. ಹೀಗಾಗಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ.

ಕೂಗಳತೆ ದೂರದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ರಕ್ಷಣೆಗೆ ಧಾವಿಸಿದ್ದು, ಗ್ಯಾಸ್ ವೆಲ್ಡರ್‌ನನ್ನು ಕರೆಸಿ ಟಿಪ್ಪರ್‌ನ ಡೋರ್ ಹಾಗೂ ಮುಂಭಾಗವನ್ನು ಕತ್ತರಿಸಿ ಚಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ | Machinery Accident | ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಿಷನ್‌ಗೆ ಸಿಲುಕಿ ರೈತನ ಕೈ ಕಟ್‌

Exit mobile version