Site icon Vistara News

Road Accident : ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು; ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಬಿದ್ದ ಟಿಪ್ಪರ್‌ ಚಾಲಕ!

A Tipper fell into a 2000 feet cliff at Charmadi Ghat

ಚಿಕ್ಕಮಗಳೂರು: ನಮ್ಮ ಟೈಂವೊಂದು ಚೆನ್ನಾಗಿದ್ದರೆ ಪ್ರಪಾತಕ್ಕೆ ಬಿದ್ದರೂ ಸಾವಿನ ದವಡೆಯಿಂದ ಪಾರಾಗಬಹುದು. ಇದಕ್ಕೆ ನಿರ್ದಶನ ಎಂಬಂತೆ 2000 ಅಡಿ ಪ್ರಪಾತಕ್ಕೆ ಬಿದ್ದರೂ, ಚಾಲಕನೊರ್ವ ಪವಾಡ ಸದೃಶ್ಯ ಎಂಬಂತೆ ಬದುಕಿ ಬಂದಿದ್ದಾನೆ. ಚಾರ್ಮಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಟಿಪ್ಪರ್‌ ಸಮೇತ ಚಾಲಕ ಕೆಳಗೆ ಬಿದ್ದಿದ್ದಾನೆ.

ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯೊಂದು ಸೋಮನಕಾಡು ಬಳಿ ಬಂದಾಗ ದಟ್ಟ ಮಂಜು ಆವರಿಸಿತ್ತು. ರಸ್ತೆ ಕಾಣದಂತಾಗಿ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪ್ರಪಾತಕ್ಕೆ ಉರುಳಿ ಬಿದ್ದಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಟಿಪ್ಪರ್‌ ಲಾರಿ ಉರುಳಿ ಬಿದ್ದ ರಭಸವನ್ನು ನೋಡಿದವರೆಲ್ಲವೂ ಚಾಲಕ ಸ್ಪಾಟ್‌ಔಟ್‌ ಆಗಿರಬೇಕು ಎಂದೇ ತಿಳಿದಿದ್ದರು.

ವಿಚಾರ ತಿಳಿದು ಸ್ಥಳಕ್ಕಾಗಿಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೊಂಟಕ್ಕೆ ಹಗ್ಗ ಕಟ್ಡಿಕೊಂಡು ಪ್ರಪಾತಕ್ಕೆ ಇಳಿದರು. ಟಿಪ್ಪರ್‌ ಬಿದ್ದ ಜಾಗಕ್ಕೆ ಹೋದಾಗ ಚಾಲಕ ಪವಾಡದಂತೆ ಬದುಕುಳಿದಿದ್ದರು. ಲಾರಿ ಚಾಲಕನ ಸೊಂಟ ಮುರಿದಿದ್ದರಿಂದ ಆತ ಅಲ್ಲೇ ನರಳಾಡುತ್ತಿದ್ದ. ಕೂಡಲೇ ಪ್ರಪಾತದಿಂದ ಆತನ ಮೇಲೆತ್ತಿ, ಆಂಬ್ಯುಲೆನ್ಸ್‌ನಲ್ಲಿ ಮಂಗಳೂರಿನ ಆಸ್ಪತ್ರೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ:Karnataka Politics : ಸ್ತ್ರೀ ಎಂದರೆ ಅಷ್ಟೇ ಸಾಕೆ?; ಮಹಿಳಾ ದೌರ್ಜನ್ಯ ವಿಚಾರದಲ್ಲಿ ಕಾಂಗ್ರೆಸ್‌-ಬಿಜೆಪಿ ವಾರ್‌

ಘಟ್ಟ ಪ್ರದೇಶದಲ್ಲಿ ಭಾರೀ ಮಂಜು ಕವಿದಿರುವುದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪ್ರಪಾತಕ್ಕೆ ಬಿದ್ದಿತ್ತು. ಈ ಹಿಂದೆಯು ಹಲವು ವಾಹನ ಸವಾರರು ಮಂಜು ಕವಿದ ಕಾರಣಕ್ಕೆ ರಸ್ತೆ ಕಾಣದೆ ಅಪಘಾತಗಳು ಸಂಭವಿಸಿದೆ. ಹೀಗಾಗಿ ಪೊಲೀಸರು ಇಂತಹ ಸಮಯದಲ್ಲಿ ನಿಧಾನವಾಗಿ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಇನ್ನು ಈ ಘಟನೆಯಲ್ಲಿ 2000 ಅಡಿ ಆಳಕ್ಕೆ ಬಿದ್ದ ಲಾರಿಯು ಸಂಪೂರ್ಣ ಜಖಂಗೊಂಡಿದೆ. ಪೊಲೀಸ್, ಅರಣ್ಯ ಸಿಬ್ಬಂದಿ, ಸಮಾಜ ಸೇವಕ ಆರೀಫ್, ರೆಹಮಾನ್‌ ಚಾಲಕನ ರಕ್ಷಣೆ ಮಾಡಿದ್ದಾರೆ. ಪವಾಡದಂತೆ ಬದುಕುಳಿದಿರುವ ಲಾರಿ ಚಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಇದನ್ನೂ ಓದಿ:KSET Exam 2024: ಕೆ-ಸೆಟ್‌ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರಕ್ಕೆ ವಿನಾಯಿತಿ; ಸಣ್ಣ ಕಿವಿಯೋಲೆ ತೆಗೆಸಿದ್ದಕ್ಕೆ ಕಿಡಿ

ಅಪರಿಚಿತ ವಾಹನ ಡಿಕ್ಕಿಯಾಗಿ ಕುರಿಗಳು ಸೇರಿ ಕುರಿಗಾಯಿಯೂ ಸಾವು

ರಾಯಚೂರು ನಗರದ ಹೊರವಲಯದ ಪವರ್ ಗ್ರಿಡ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿ ಸೇರಿ 6 ಕುರಿಗಳು ಮೃತಪಟ್ಟಿವೆ. ತೆಲಂಗಾಣದ ಕೆ.ಟಿ.ದೊಡ್ಡಿ ಮೂಲದ ಶಿವು (35) ಮೃತ ದುರ್ದೈವಿ.

ಬೆಳಗಿನ ಜಾವ ಕುರಿಗಳೊಂದಿಗೆ ಹೊರಟಿದ್ದಾಗ ಅಪರಿಚಿತ ವಾಹನವು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಶಕ್ಕೆ ಕೆಳಗೆ ಬಿದ್ದ ಶಿವು ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಅಪಘಾತ ಬಳಿಕ ಡಿಕ್ಕಿ ಹೊಡೆದ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದಾನೆ. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version