Site icon Vistara News

Road Accident : ಬೈಕ್‌ಗಳ ನಡುವೆ ಡಿಕ್ಕಿ; ಕೆಳಗೆ ಬಿದ್ದವನು ಟಿಪ್ಪರ್‌ ಚಕ್ರದಡಿ ಅಪ್ಪಚ್ಚಿ

Bike Accidents

ಹೊಸಕೋಟೆ: ಬೈಕ್‌ ಅಪಘಾತದಲ್ಲಿ ಕೆಳಗೆ ಬಿದ್ದ ಸವಾರನೊಬ್ಬ ಟಿಪ್ಪರ್‌ ಲಾರಿ ಚಕ್ರದಡಿ ಸಿಲುಕಿ ಮೃತಪಟ್ಟಿರುವ ದಾರುಣ (Road Accident) ಘಟನೆ ನಡೆದಿದೆ. ದರ್ಶನ್ (25) ಎಂಬಾತ ಮೃತ ದುರ್ದೈವಿ ಆಗಿದ್ದು, ಮತ್ತೊಬ್ಬ ಸವಾರನ ಸ್ಥಿತಿ ಗಂಭೀರವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದ ಟೋಲ್ ಪ್ಲಾಜಾ ಬಳಿ ಈ ದುರ್ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಬೈಕ್‌ಗಳು ಒಂದಕ್ಕೊಂದು ಟಚ್ ಆಗಿದ್ದು, ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಸವಾರನ ಮೇಲೆ ಟಿಪ್ಪರ್ ಹರಿದಿದೆ. ಪರಿಣಾಮ ಸ್ಥಳದಲ್ಲೇ ದರ್ಶನ್ (25) ಮೃತಪಟ್ಟಿದ್ದರೆ. ಮತ್ತೊಬ್ಬ ಸವಾರನ ಸ್ಥಿತಿ ಗಂಭೀರವಾಗಿದೆ.

ಬೈಕ್‌ ಸವಾರರು ಕೋಲಾರ ಕಡೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದರು. ಈ ವೇಳೆ ಬೈಕ್‌ ಹಾಗೂ ಸ್ಕೂಟರ್‌ ನಡುವೆ ಅಪಘಾತ ನಡೆದಿದೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಪಕ್ಕದಲ್ಲಿ ಬರುತ್ತಿದ್ದ ಟಿಪ್ಪರ್‌ ಚಕ್ರದ ಕೆಳಗೆ ಸಿಲುಕಿ ದರ್ಶನ್‌ ಮೃತಪಟ್ಟಿದ್ದಾನೆ.

ಕೋಲಾರ-ಬೆಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಗೊಂಡ ಮತ್ತೊಬ್ಬ ಸವಾರನನ್ನು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Hassan News : ಹುತ್ತದ ಬಳಿ ಸ್ವಾಮೀಜಿಗಳ ಹತ್ತಾರು ಪಾದುಕೆ, ದಂಡ ಪ್ರತ್ಯಕ್ಷ!

ಜೀವಾ ಕ್ಷಣಿಕ ಕಣೋ!; ಔಷಧ ಖರೀದಿಗೆ ಮೆಡಿಕಲ್‌ಗೆ ಬಂದಾಗಲೇ ಹೃದಯಾಘಾತ

ಮೈಸೂರು: ಈ ಹೃದಯ ಎನ್ನುವುದು ಯಾವ ಕ್ಷಣದಲ್ಲಿ ಆಘಾತಕ್ಕೆ (Heart Attack) ಒಳಗಾಗುತ್ತದೆ ಎಂದು ಅಂದಾಜಿಸಲೂ ಸಾಧ್ಯವಿಲ್ಲ. ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಸ್ತಬ್ಧವಾಗುವುದು.. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಮೈಸೂರಿನಲ್ಲಿ ಮೆಡಿಕಲ್‌ ಸ್ಟೋರ್‌ಗೆ (Medical Stores) ಔಷಧ ತೆಗೆದುಕೊಳ್ಳಲೆಂದು ಬಂದ ವ್ಯಕ್ತಿ ಅಲ್ಲೇ ಕುಸಿದು ಬಿದ್ದು ಪ್ರಾಣ (Man dies in front of Medical stores) ಕಳೆದುಕೊಂಡ ದಾರುಣ ಘಟನೆಯೊಂದು ನಡೆದಿದೆ. ಅದರ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಮೈಸೂರಿನ ಉದಯಗಿರಿ ಮೆಡಿಕಲ್ ಸ್ಟೋರ್‌ನಲ್ಲಿ ಘಟನೆ ನಡೆದಿದೆ. ಜಗದೀಶ್ (38) ಎಂಬವರೇ ಹೃದಯಾಘಾತದಿಂದ ಮೃತಪಟ್ಟವರು. ಅವರು ಔಷಧ ಕೊಳ್ಳಲೆಂದು ಮೆಡಿಕಲ್‌ ಸ್ಟೋರ್‌ಗೆ ಬಂದವರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾತಮಾರನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಜಗದೀಶ್ ಅವರ ಸಾವು ಬದುಕಿನ ಕ್ಷಣಿಕತೆಯನ್ನು ಮತ್ತೆ ಮತ್ತೆ ನೆನಪಿಸುತ್ತಿದೆ.

ಹೇಗೆ ಸಂಭವಿಸಿತು ಸಾವು? ಏನಿದೆ ವಿಡಿಯೊದಲ್ಲಿ?

ಕ್ಯಾತಮಾರನಹಳ್ಳಿಯಲ್ಲಿ ಚಿಕನ್‌ ಅಂಗಡಿ ಇಟ್ಟುಕೊಂಡಿರುವ ಜಗದೀಶ್‌ ಅವರಿಗೆ ಬಹುಶಃ ಬೆಳಗ್ಗಿನಿಂದಲೇ ಎದೆ ನೋವು ಕಾಡಿರಬೇಕು. ಅವರು ಉದಯಗಿರಿ ಮೆಡಿಕಲ್‌ ಸ್ಟೋರ್‌ಗೆ ಬರುತ್ತಲೇ ಎದೆಗೆ ಕೈ ಹಿಡಿದುಕೊಂಡೇ ಬರುತ್ತಾರೆ. ಮೆಟ್ಟಿಲು ಹತ್ತಿ ಮೇಲೆ ಬರುವಾಗಲೂ ಅವರ ಮುಖದಲ್ಲಿ ನೋವು ಕಾಣಿಸುತ್ತದೆ.

ಅವರು ಮೆಡಿಕಲ್‌ಗೆ ಬಂದ ಕೂಡಲೇ ಕೌಂಟರ್‌ನ ಟೇಬಲ್‌ಗೆ ಆತುಕೊಂಡೇ ಆಧರಿಸಿ ನಿಲ್ಲುತ್ತಾರೆ. ಆಗ ಅಂಗಡಿಯ ಮಾಲೀಕರು ಅತ್ತ ಇನ್ನೊಬ್ಬ ಯುವತಿಗೆ ಔಷಧ ಕೊಡುತ್ತಿರುತ್ತಾರೆ. ಈ ಕಡೆ ಜಗದೀಶ್‌ ಬಂದಿರುವುದನ್ನು ಗಮನಿಸಿ ಅವರು ಇತ್ತ ಬರುತ್ತಾರೆ.

ಅಷ್ಟು ಹೊತ್ತಿಗೆ ಜಗದೀಶ್‌ ಅವರು ಅಲ್ಲೇ ಓಲಾಡುತ್ತಾ ಕುಸಿದು ಬೀಳುತ್ತಾರೆ. ಆಗ ಅಂಗಡಿ ಮಾಲೀಕರು ಹೊರಗೆ ಓಡಿ ಬಂದು ಅವರನ್ನು ಎತ್ತಿ ಕೂರಿಸುವ ಯತ್ನ ಮಾಡುತ್ತಾರೆ. ಆದರೆ, ಅಷ್ಟು ಹೊತ್ತಿಗೆ ಬಹುತೇಕ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ಹೃದಯಾಘಾತದಿಂದ ಸಂಭವಿಸಿದ ಈ ಸಾವಿನ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಮೈಸೂರಿನ ಈ ಭಾಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹೀಗೆ ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳುವ ನೋವು, ಒಮ್ಮಿಂದೊಮ್ಮೆಗೇ ವಕ್ಕರಿಸುವ ಸಾವನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ ಜನರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜಗದೀಶ್‌ ಅವರು ಕುಟುಂಬವನ್ನು ಹೊಂದಿದ್ದು, ಅವರೆಲ್ಲ ಈ ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ಇದನ್ನೂ ಓದಿ: World Heart Day: ಈ ಸಂಗತಿಗಳನ್ನು ಪಾಲಿಸಿದರೆ ಹೃದಯಾಘಾತದ ರಿಸ್ಕೇ ಇಲ್ಲ!

ನಲ್ವತ್ತು ವರ್ಷದ ನಂತರ ಪ್ರತಿಯೊಬ್ಬರು ಕೂಡಾ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು, ಆಗಾಗ ಆರೋಗ್ಯ ತಪಾಸಣೆ ನಡೆಸಬೇಕು. ಅದರಲ್ಲೂ ಹೃದಯದ ತಪಾಸಣೆಯನ್ನು ವರ್ಷಕ್ಕೊಮ್ಮೆಯಾದರೂ ಮಾಡಿಸಿಕೊಳ್ಳಬೇಕು ಎಂಬ ಸಲಹೆಯನ್ನು ವೈದ್ಯರು ನೀಡುತ್ತಾರೆ. ಇದನ್ನು ಪಾಲಿಸಿದರೆ ಸ್ವಲ್ಪ ಮಟ್ಟಿಗೆ ಇಂಥ ಸಡನ್‌ ಅಪಾಯಗಳಿಂದ ಪಾರಾಗಬಹುದು ಎನ್ನುವುದು ಅವರ ಸಲಹೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version