Site icon Vistara News

Road Accident : ಹಾಸನದಲ್ಲಿ ಭೀಕರ ಅಪಘಾತ; ಬೆಂಗಳೂರಿನ ವ್ಯಕ್ತಿ ಸಾವು, 6 ಮಂದಿ ಗಂಭೀರ

Bike Accident

ಹಾಸನ/ರಾಮನಗರ: ಹಾಸನದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೆ, ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಕ್ರಾಸ್‌ ಬಳಿಯ ರಾ.ಹೆ 75ರ ಫ್ಲೈಒವರ್ ಬಳಿ ಕ್ಯಾಂಟರ್ ವಾಹನ ಹಾಗೂ ಇನ್ನೋವಾ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ (Road Accident) ಸ್ಥಳದಲ್ಲೇ ಒಬ್ಬ ಜೀವ ಬಿಟ್ಟಿದ್ದರೆ, ಆರು ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರು ಮೂಲದ ನಂದಕುಮಾರ್ (37) ಮೃತ ದುರ್ದೈವಿ. ಮಂಗಳವಾರ ಮುಂಜಾನೆ (ಸೆ. 12) ಈ ಅವಘಡ ನಡೆದಿದೆ. ಇನ್ನೋವಾ ಕಾರು ಬೆಂಗಳೂರು ಕಡೆಗೆ ತೆರಳುತ್ತಿದ್ದರೆ, ಹಾಸನದ ಕಡೆಗೆ ಬರುತ್ತಿದ್ದ ಕ್ಯಾಂಟರ್ ನಡುವೆ ಡಿಕ್ಕಿಯಾಗಿದೆ. ಇನ್ನೋವಾದಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿವೆ.

ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಇಬ್ಬರಿಗೆ, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಇನ್ನೋವಾದಲ್ಲಿದ್ದ ಏಳು ಮಂದಿ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಅಪಘಾತದ ನಂತರ ಕ್ಯಾಂಟರ್ ಚಾಲಕ ಪರಾರಿ ಆಗಿದ್ದಾನೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್‌-ಕಾರು ಡಿಕ್ಕಿ

ರಾಮನಗರದ ಮಾಗಡಿ ತಾಲೂಕಿನ ಕಾಳಾರಿ ಗೇಟ್ ಬಳಿ ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬೈಕ್ ಸವಾರಿಗೆ ಗಂಭೀರ ಗಾಯವಾಗಿದೆ. ಬೆಂಗಳೂರು-ಕುಣಿಗಲ್ ಮುಖ್ಯ ರಸ್ತೆಯಲ್ಲಿ ಅಪಘಾತ ನಡೆದಿದೆ. ಕುಣಿಗಲ್ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Red sanders : ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ಕಾರು ಪಲ್ಟಿ: ಮೂವರಿಗೆ ಗಂಭೀರ ಗಾಯ, ಹುಬ್ಬಳ್ಳಿಯಲ್ಲಿ ಅಂಗಡಿ ಭಸ್ಮ

ಗ್ಯಾಸ್‌ ತುಂಬಿಸುವಾಗ ಅಗ್ನಿ ಅವಘಡ; ಧಗೆ ಧಗೆನೆ ಹೊತ್ತಿ ಉರಿದ ಒಮಿನಿ ಕಾರು

ತ್ರದುರ್ಗ: ನಗರದ ಫಿಲ್ಟರ್ಸ್ ನಗರದಲ್ಲಿ ಒಮಿನಿ ಕಾರಲ್ಲಿದ್ದ ಸಿಲಿಂಡರ್ ಏಕಾಏಕಿ (Car blast) ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದಿಂದ ಒಮ್ಮೆಲೆ ಒಮಿನಿ ಕಾರು ಹೊತ್ತಿ ಉರಿದಿದೆ. ಒಮಿನಿ ಕಾರಿಗೆ ಗ್ಯಾಸ್ ತುಂಬಿಸುವ ವೇಳೆ ಈ ಅವಘಡ ನಡೆದಿದೆ. ಅಗ್ನಿ ಅವಘಡದಲ್ಲಿ ಕಾರು ಹಾಗೂ ಪಕ್ಕದಲ್ಲಿದ್ದ ಟಿವಿಎಸ್ ಎಕ್ಸೆಲ್, ಬೈಕ್ ಎಲ್ಲವೂ ಸುಟ್ಟು ಕರಕಲಾಗಿದೆ.

ಮೆಹಬೂಬ್‌ ಎಂಬುವವರು ಪ್ರತಿ ನಿತ್ಯ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಅದೃಷ್ಟವಾಶತ್‌ ಸಿಲಿಂಡರ್‌ ಸ್ಪೋಟದ ಸಮಯದಲ್ಲಿ ಯಾರು ಇರಲಿಲ್ಲ. ಹೀಗಾಗಿ ದುರಂತವೊಂದು ತಪ್ಪಿದೆ.

ಸಿಲಿಂಡರ್‌ ಸ್ಪೋಟವಾಗುತ್ತಿದ್ದಂತೆ ಅಕ್ಕ-ಪಕ್ಕದವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಪರದಾಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಬೆಂಕಿಯ ಕೆನ್ನಾಲಿಯಲ್ಲಿ ಕಾರು ಸುಟ್ಟು ಕರಕಲಾಗಿದೆ.

ತಡವಾಗಿ ಬಂದ ಅಗ್ನಿಶಾಮಕ ಸಿಬ್ಬಂದಿಗೆ ತರಾಟೆ

ಇತ್ತ ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆದರೆ ಸ್ಥಳಕ್ಕೆ ತಡವಾಗಿ ಬಂದಿದ್ದಕ್ಕೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ. ಎಲ್ಲಾ ಸತ್ತ ಮೇಲೆ ಬರುತ್ತಿರಿ ನೀವು ಈಗ ಯಾಕೆ ಬಂದ್ದಿರಿ. ಫೋನ್ ಮಾಡಿ ಒಂದು ಗಂಟೆ ಮೇಲೆ ಸ್ಥಳಕ್ಕೆ ಬಂದಿದ್ದೀರಾ ಎಂದು ಕಿಡಿಕಾರಿದರು. ಅಕ್ಕಪಕ್ಕದ ಮನೆ ಹೊತ್ತಿ ಉರಿದಿದ್ದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version