ಆನೇಕಲ್: ಇಲ್ಲಿನ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿಯ ಆನೇಕಲ್- ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ (Road Accident) ನಡೆದಿದ್ದು, ಹಿಟ್ ಅಂಡ್ ರನ್ಗೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕುಂಬಾರನಹಳ್ಳಿ ನಿವಾಸಿ ನಂಜುಂಡರೆಡ್ಡಿ ಮೃತ ದುರ್ದೈವಿ. ನಂಜುಂಡ ಜಿಗಣಿಯಿಂದ ಆನೇಕಲ್ ಕಡೆ ಬೈಕ್ನಲ್ಲಿ ಸಾಗುತ್ತಿದ್ದರೂ, ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.
ಹಿಟ್ ಅಂಡ್ ರನ್ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | ಅಪಘಾತ ಗಾಯಾಳುವಿಗೆ ನೆರವು, ಮಾನವೀಯತೆ ಮೆರೆದ ಗುಬ್ಬಿ ಶಾಸಕ ಶ್ರೀನಿವಾಸ್