Site icon Vistara News

Road Accident : ಲಾರಿ ಓವರ್‌ ಟೇಕ್ ಮಾಡಲು ಹೋಗಿ ಸಾವಿನ ಮನೆ ಸೇರಿದ ನಾಲ್ವರು! ಮತ್ತೊಬ್ಬ ಗಂಭೀರ

Accident while overtaking lorry in raichur

ರಾಯಚೂರು: ಲಾರಿಯನ್ನು ಓವರ್‌ ಟೇಕ್‌ ಮಾಡಲು ಹೋಗಿ ಟಾಟಾಯೆಸ್‌ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ರಾಯಚೂರು ಜಿಲ್ಲೆ ಸಿಂಧನೂರು ತಾ.ಪಗಡದಿನ್ನಿ ಕ್ಯಾಂಪ್ ಬಳಿ ಘಟನೆ ನಡೆದಿದೆ.

ಇಸ್ಮಾಯಿಲ್(25), ಚನ್ನಬಸವ (26), ಅಂಬರೀಶ್ (20), ರವಿ( 21) ಮೃತ ದುರ್ದೈವಿಗಳು. ಮದುವೆ ಸಮಾರಂಭಕ್ಕಾಗಿ ಶಾಮಿಯಾನ ಲೋಡ್‌ನೊಂದಿಗೆ ಡೆಕೋರೆಷನ್ ಮಾಡಲು ಹೊರಟ್ಟಿದ್ದರು. ಈ ವೇಳೆ ಲಾರಿಯನ್ನು ಓವರ್‌ ಟೆಕ್‌ ಮಾಡಲು ಹೋಗಿ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಯುವಕ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಿ ದರ್ಶನಕ್ಕೆ ಹೊರಟ್ಟಿದ್ದ ವಾಹನ ಪಲ್ಟಿ; 8 ಮಂದಿಗೆ ಗಾಯ

ಟಾಟಾ ಎಸ್ ಪಲ್ಟಿಯಾದ ಪರಿಣಾಮ 8 ಹೆಚ್ಚು ಜನರು ಗಾಯಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಲೋಯಲಾ ಶಾಲೆ ಬಳಿ ಅಪಘಾತ ನಡೆದಿದೆ. ಬೇವಿನಾಳ ಗ್ರಾಮದಿಂದ ಅಫಜಲಪೂರ ತಾಲೂಕಿನ ಘತ್ತರಗಾ ಗ್ರಾಮದ ಶ್ರೀ ಘತ್ತರಗಿ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ಜಾವಳ ಕಾರ್ಯಕ್ರಮಕ್ಕೆ ಹೊರಟಿದ್ದರು.

ಆದರೆ ಸಿಂದಗಿ ಯರಗಲ್ ಮಾರ್ಗ ಮಧ್ಯದಲ್ಲಿ ಬರುವಾಗ ಗುರುವಾರ ಬೆಳಗಿನ ಜಾವ ಅಪಘಾತವಾಗಿದೆ. ಎಂಟು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸ್ಥಳದಲ್ಲಿದ್ದ ರಾಜ್ಯ ರೈತ ಸಂಘದ ಕಾರ್ಯದರ್ಶಿ ಪೀರು ಕೆರೂರ ಪೊಲೀಸರಿಗೆ ಮಾಹಿತಿ ನೀಡಿ ತಮ್ಮ ಸ್ವಂತ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ನಾಲ್ವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಡ್ಡಾದಿಡ್ಡಿಯಾಗಿ ಬಂದ ಲಾರಿಯಿಂದ ಸರಣಿ ಅಪಘಾತ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಳಿ ಅಡ್ಡಾದಿಡ್ಡಿ ಬಂದ ಲಾರಿಯಿಂದ ಸರಣಿ ಅಪಘಾತ ಸಂಭವಿಸಿದೆ. ಮೈನ್ಸ್ ಲಾರಿ ಚಾಲಕನ ಅಜಾಗರುಕತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಹೆದ್ದಾರಿ ಬಿಟ್ಟು ಸರ್ವಿಸ್‌ ರಸ್ತೆಗೆ ನುಗ್ಗಿದ ಲಾರಿಯು ನಿಂತಿದ್ದ ಒಂದು ಆಟೋ ರಿಕ್ಷಾ ಹಾಗೂ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಫುಟ್ ಪಾತ್‌ನಲ್ಲಿದ್ದವರು ದಿಕ್ಕಪಾಲಾಗಿ ಓಡಿದರು.

ಘಟನೆಯಲ್ಲಿ ಬೈಕ್ ಸವಾರ‌ ಸಂಗಪ್ಪ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸಂಗಪ್ಪ ಅವರು ಮಗಳನ್ನು ಬಸ್ ಸ್ಟ್ಯಾಂಡ್‌ಗೆ ಬಿಡಲು ಬಂದಾಗ ಈ ಅಪಘಾತ ಸಂಭವಿಸಿದೆ. ಸಂಗಪ್ಪರ ಮಗಳು‌ ಸವಿತಾ ಹಾಗೂ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೂ‌ ಗಾಯವಾಗಿವೆ. ಸುರತ್ಕಲ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version