Site icon Vistara News

Road accident | ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಮೂರು ವರ್ಷದ ಮಗು ಸ್ಥಳದಲ್ಲಿಯೇ ಸಾವು‌

Cahamarajanagara accident

ಚಾಮರಾಜನಗರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮವಾಗಿ ಮೂರು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ಈ ದುರಂತ ನಡೆದಿದೆ. ಮೂರು ವರ್ಷದ ಮಗು ತನ್ಮಯ್‌ ಪ್ರಾಣ ಕಳೆದುಕೊಂಡಿದ್ದರೆ, ಮಗುವಿನ ತಂದೆ-ತಾಯಿ ಸೇರಿದಂತೆ ಆರು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳು ಕಾಮಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನ ಸಿಗದೆ ಇದ್ದಾಗ ಕೊನೆಗೆ ಗೂಡ್ಸ್‌ ವಾಹನವೊಂದರಲ್ಲಿ ಕರೆದೊಯ್ಯಬೇಕಾಯಿತು.

ಗೂಡ್ಸ್‌ ವಾಹನದಲ್ಲಿ ಗಾಯಾಳುಗಳ ಸಾಗಾಟ

ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಕುಟುಂಬ ಮೈಸೂರು ಕಡೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Motivational story | Don’t worry ನಮ್ಮ ಅತಿ ದೊಡ್ಡ ದೌರ್ಬಲ್ಯವೇ ನಮ್ಮ ಅತಿ ದೊಡ್ಡ ಶಕ್ತಿಯೂ ಆದೀತು!

Exit mobile version