Site icon Vistara News

Road Accident : ನೇತ್ರಾವತಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವು

Mangalore accident

#image_title

ಮಂಗಳೂರು: ಉಳ್ಳಾಲ ಸಮೀಪದ ನೇತ್ರಾವತಿ ನದಿ ಸೇತುವೆಯಲ್ಲಿ ಕೆಟ್ಟು ನಿಂತ ಲಾರಿಗೆ ಸ್ಕೂಟರ್‌ ಒಂದು ಡಿಕ್ಕಿ ಹೊಡೆದು (Road Accident) ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ನಡೆದ ಘಟನೆಯಲ್ಲಿ ಮೃತಪಟ್ಟ ಸವಾರನನ್ನು ಮಹಮ್ಮದ್ ನೌಫಾಲ್ (26) ಎಂದು ಗುರುತಿಸಲಾಗಿದೆ. ಸಹ ಸವಾರ ಫಾರೂಕ್ ಗೆ ಗಂಭೀರ ಗಾಯಗಳಾಗಿವೆ.

ನಸುಕಿನ ಜಾವದಲ್ಲಿ ನಡೆದಿರುವ ಅಪಘಾತ ಇದಾಗಿದ್ದು, ಸೇತುವೆ ನಡುವೆ ಮರ ಸಾಗಾಟದ ಲಾರಿ ಕೆಟ್ಟು ನಿಂತಿತ್ತು. ಮಹಮ್ಮದ್ ನೌಫಾಲ್ (26) ಮತ್ತು ಫಾರೂಕ್ ಎಂದಿನಂತೆ ತರಕಾರಿ ವ್ಯಾಪಾರಕ್ಕಾಗಿ ಕಲ್ಲಾಪುಗೆ ಬರುತ್ತಿದ್ದರು.

ಮೃತಪಟ್ಟ ನೌಫಾಲ್

ಅವರು ಪಂಪ್‌ವೆಲ್‌ನಿಂದ ಹೊರಟು ಕಲ್ಲಾಪು ಗ್ಲೋಬಲ್ ಮಾರ್ಕೆಟ್‌ಗೆ ಬರುವಾಗ ಎದುರು ಲಾರಿ ನಿಂತಿರುವುದನ್ನು ಗಮನಿಸದೆ ಹೋಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ರಸ್ತೆಗೆ ಉರುಳಿದ್ದು, ಮಹಮ್ಮದ್‌ ನೌಫಾಲ್‌ ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.‌

ನೌಫಾಲ್ ಅವರ ಸ್ಕೂಟರ್ ಡಿಕ್ಕಿ ಹೊಡೆದ ಕೆಲವೇ ಕ್ಷಣದಲ್ಲಿ ಮತ್ತೊಂದು ಸ್ಕೂಟರ್ ಕೂಡಾ ಅದೇ ಲಾರಿಗೆ ಡಿಕ್ಕಿ ಹೊಡೆಇದೆ. ಅದರ ಸವಾರರಿಗೂ ಗಾಯಗಳಾಗಿವೆ. ಮೂವರೂ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road Accident: ಬೈಕ್‌ಗೆ ಲಾರಿ ಡಿಕ್ಕಿ, ಇಬ್ಬರು ಸಾವು, ಇಬ್ಬರಿಗೆ ಗಾಯ

Exit mobile version