ಉಡುಪಿ: ಶಾಲೆಗೆ ಹೋಗಲೆಂದು ರಸ್ತೆ ಬದಿ ನಿಂತು ದಾಟಲು ಕಾಯುತ್ತಿದ್ದ ಬಾಲಕಿಯೊಬ್ಬಳಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಆಕೆ ಗಂಭೀರ ಗಾಯಗೊಂಡಿದ್ದಾಳೆ.
ಕಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಕಾಪು ಮಹಾದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ ವರ್ಷಿತಾ ಶೇರ್ವೆಗಾರ ( 13) ಗಾಯಗೊಂಡ ಬಾಲಕಿ.
ಬೆಳಿಗ್ಗೆ ಶಾಲೆಗೆ ಹೋಗುವ ವೇಳೆ ರಸ್ತೆ ದಾಟುಲು ರಸ್ತೆ ಪಕ್ಕ ನಿಂತಿದ್ದಾಗ ಉಡುಪಿ ದ ಮಂಗಳೂರು ಕಡೆಗೆ ತೆರಳುತ್ತಿದ್ದವ ಬಸ್ ಢಿಕ್ಕಿ ಹೊಡೆದಿದೆ. ಬಾಲಕಿಯ ತಲೆಗೆ ಗಂಭೀರ ಏಟಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕೊಟ್ಟಿಗೆಹಾರದ ರಸ್ತೆಯಲ್ಲಿ ರಕ್ತದ ಕಲೆ! ನಿಗೂಢದ ಹಿಂದೆ ಹಲವು ಊಹಾಪೋಹ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಪಟ್ಟಣದ ರಸ್ತೆಯಲ್ಲಿ ಉದ್ದಕ್ಕೂ ರಕ್ತದ ಕಲೆಗಳು ಕಂಡುಬಂದಿದ್ದು, ಸೋಜಿಗ, ಕುತೂಹಲ ಮೂಡಿಸಿದೆ.
ಕೊಟ್ಟಿಗೆಹಾರ ಪಟ್ಟಣದ ರಸ್ತೆಯಲ್ಲಿ ನಾಲ್ಕು ಅಡಿಗೂ ಹೆಚ್ಚು ದೂರ ರಕ್ತದ ಕಲೆ ದಪ್ಪಕ್ಕೆ ಕಾಣಿಸಿಕೊಂಡಿದೆ. ರಕ್ತದ ಕಲೆ ಕಾಣದಂತೆ ಸಗಣಿಯನ್ನೂ ಸಾರಿಸಿರುವುದು ಕಂಡುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರಕ್ತದ ಕಲೆಗಳ ಹಿಂದೆ ಹಲವು ಅನುಮಾನ ವ್ಯಕ್ತವಾಗಿದೆ. ಕಳೆದೆರಡು ತಿಂಗಳ ಹಿಂದೆ ಇಲ್ಲೇ ಪಕ್ಕದ ಚಾರ್ಮಾಡಿ ಘಾಟಿಯಲ್ಲಿ ಇಬ್ಬರ ಶವ ಎಸೆದಿದ್ದ ಪ್ರಕರಣ ಪತ್ತೆಯಾಗಿದ್ದು, ಎರಡರಲ್ಲಿ ಒಂದು ಶವ ಮಾತ್ರ ಇದುವರೆಗೆ ಸಿಕ್ಕಿದೆ. ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿರುವ ಶಂಕೆಯಿದ್ದು, ಕೈಕೊಟ್ಟಿರುವ ಸಿಸಿಟಿವಿಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಬೆಂಗಳೂರು ಮತ್ತಿತರ ಕಡೆ ನಡೆದ ಕೊಲೆ ಪ್ರಕರಣಗಳನ್ನು ಮುಚ್ಚಿಹಾಕಲು ಚಾರ್ಮಾಡಿಗೆ ತಂದು ಎಸೆಯುವ ಘಟನೆಗಳು ಇತ್ತೀಚೆಗೆ ವರದಿಯಾಗಿದ್ದವು.
ಇದನ್ನೂ ಓದಿ : Child fell from Balcony : ಬಾಲ್ಕನಿಯಿಂದ ಕೆಳಗೆ ಬಿದ್ದ ಮಗುವಿನ ಆರೋಗ್ಯ ಹೇಗಿದೆ? ಹೆತ್ತವರು ಹೇಳೋದೇನು?