Site icon Vistara News

Road accident | ಆಟೋ ರಿಕ್ಷಾ- ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

ಗದಗ ಅಪಘಾತ

ಗದಗ: ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ಪ್ಯಾಸೆಂಜರ್ ಆಟೋ ಮತ್ತು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ (Road accident) ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಮರಗೌಡ (30), ಮುತ್ತಪ್ಪ (27) ಮೃತಪಟ್ಟ ದುರ್ದೈವಿಗಳು.

ರೋಣ ತಾಲೂಕಿನ ಹಿರೇಹಾಳದ ಅಮರಗೌಡ ಬೈಕ್‌ನಲ್ಲಿದ್ದರೆ, ಶಾಂತಗೇರಿ ಗ್ರಾಮದ ಮುತ್ತಪ್ಪ ರಿಕ್ಷಾದಲ್ಲಿದ್ದರು. ಬೈಕ್‌ ಹಿರೇಹಾಳ ಗ್ರಾಮದಿಂದ ರೋಣ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಪ್ಯಾಸೆಂಜರ್ ಆಟೋ ರೋಣದಿಂದ ಬಾದಾಮಿಗೆ ಹೊರಟಿತ್ತು. ರೋಣಪಟ್ಟಣದ ಹೊರವಲಯದಲ್ಲಿ ಅಪಘಾತ ಸಂಭವಿಸಿತು. ಘಟನೆಯಲ್ಲಿ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಆಟೋ ರಿಕ್ಷಾ ಕೂಡಾ ಉರುಳಿಬಿದ್ದಿದೆ.

ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road accident | ಮಂಗಳೂರಿನಲ್ಲಿ ಬೈಕ್‌ ಸ್ಕಿಡ್‌ ಆಗಿ ತಲೆ ಡಿವೈಡರ್‌ಗೆ ಬಡಿದು ಯುವಕ ದಾರುಣ ಮೃತ್ಯು

Exit mobile version