Site icon Vistara News

Road Accident: ಕಾರು-ಸ್ಕೂಟಿ ನಡುವೆ ಅಪಘಾತ; ಯುವತಿ ಸ್ಥಳದಲ್ಲೇ ಸಾವು

Sagara Road Accident Woman dies

#image_title

ಸಾಗರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನೇದರವಳ್ಳಿ ಸಮೀಪ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು (Road Accident) ಯುವತಿ ಮೃತಪಟ್ಟ ಘಟನೆ ಶನಿವಾರ (ಫೆ.೧೮) ಬೆಳಗ್ಗೆ ನಡೆದಿದೆ.

ಶ್ರುತಿ (23) ಮೃತ ದುರ್ದೈವಿ. ಇವರು ಭದ್ರಾವತಿ ಮೂಲದವರಾಗಿದ್ದು, ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕಾರ್ಯನಿಮಿತ್ತ ಶಿವಮೊಗ್ಗದಿಂದ ಸಾಗರ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಸ್ಕೂಟಿಯಲ್ಲಿದ್ದ ಶ್ರುತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹೈವೇ ಪ್ಯಾಟ್ರೋಲ್ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: SSC MTS Recruitment 2023 : ಎಸ್‌ಎಸ್‌ಎಲ್‌ಸಿ ಆದವರಿಗೆ ಎಂಟಿಎಸ್‌ ಹುದ್ದೆ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Exit mobile version