Site icon Vistara News

Road accident : ಬೈಕ್‌- ಲಾರಿ ಮಧ್ಯೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು

Gadaga accident

#image_title

ಗದಗ: ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ (Road accident) ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಕನಕಾಪೂರ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ನಡೆದಿದೆ. ಶಿಗ್ಲಿ ಗ್ರಾಮದ ರಾಜು‌ ಬಸರಿ(41) ಮೃತ ದುರ್ದೈವಿ.

ಡಾಬಾ ಹಾಗೂ ಹೋಟೆಲ್ ಗಳಿಗೆ ರೊಟ್ಟಿ ಪೂರೈಕೆ ಮಾಡುತ್ತಿದ್ದ ರಾಜು ಅವರು ತಮ್ಮ ಬೈಕ್‌ನಲ್ಲಿ ಶಿಗ್ಲಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣದತ್ತ ತೆರಳುತ್ತಿದ್ದರು. ಈ ವೇಳೆ‌ ಲಕ್ಷ್ಮೇಶ್ವರ ಪಟ್ಟಣದಿಂದ ಶಿಗ್ಲಿ ಗ್ರಾಮದತ್ತ ಬರುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಅಪಘಾತದ ಹೊಡೆತಕ್ಕೆ ಲಾರಿ ಕೂಡಾ ನಿಯಂತ್ರಣ ಕಳೆದುಕೊಂಡ ರಸ್ತೆ ಪಕ್ಕದ ಗುಂಡಿಗೆ ಇಳಿದು ನಿಂತಿದೆ. ಲಾರಿ ಚಾಲಕನಿಗೂ ಗಾಯಗಳಾಗಿವೆ.

ಫೋನ್‌ ಕಾಲ್‌ ರಿಸೀವ್‌ ಮಾಡಿಲ್ಲವೆಂದು ಚಾಲಕನಿಗೆ ಥಳಿಸಿದ ಕಾರು ಮಾಲೀಕ

ಬೆಂಗಳೂರು ಗ್ರಾಮಾಂತರ: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೊನಪ್ಪನ ಅಗ್ರಹಾರ ಹೋಟೆಲ್ ಬಳಿ ಕ್ಯಾಬ್‌ ಚಾಲಕನೊಬ್ಬ ಫೋನ್‌ ಕಾಲ್‌ ರಿಸೀವ್‌ ಮಾಡಿಲ್ಲವೆಂದು ಕಾರು ಮಾಲೀಕರು ಹಿಡಿದು (Assault Case) ಥಳಿಸಿದ್ದಾರೆ. ಬೀದರ್ ಮೂಲದ ಕ್ಯಾಬ್ ಚಾಲಕ ಕ್ರಿಸ್ ವಿಲಿಯಂ ಹಲ್ಲೆಗೊಳಾದವರು. ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಎಂಬುವವರು ಹಲ್ಲೆ ನಡೆಸಿದ್ದಾರೆ.

ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಎಂಬುವವರು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಸಮೀಪ ಇರುವ Vio fleet ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯವರು ಸುಮಾರು 20ಕ್ಕೂ ಅಧಿಕ ಕಾರುಗಳನ್ನು ಹೊಂದಿದ್ದಾರೆ. ಈ ಸಂಸ್ಥೆಯು ಉಬರ್ ಮೂಲಕ ಕಾರುಗಳನ್ನು ಬಾಡಿಗೆ ಕೊಡುತ್ತದೆ.

ಇತ್ತೀಚೆಗೆ ಚಾಲಕ ವಿಲಿಯಂ Workindia.in ಮೂಲಕ ಕೆಲಸಕ್ಕೆ ಹುಡುಕಾಟ ನಡೆಸಿದಾಗ Vio fleet ಸಂಸ್ಥೆಯ ಮಾಲೀಕ ರಾಜೀವ್ ರಂಜನ್ ಕೆಲಸಕ್ಕೆ ಆಫರ್ ನೀಡಿದ್ದರು. ಕೆಲಸಕ್ಕೆ ಸೇರಿದ್ದ ವಿಲಿಯಂ ಮೂರು ದಿನಗಳ ಕಾಲ ನೈಟ್ ಶಿಫ್ಟ್ ಮಾಡಿದ್ದ. ಆದರೆ, ಮೂರೇ ದಿನಕ್ಕೆ ಮಾಲೀಕನ ಕಿರುಕುಳಕ್ಕೆ ಬೇಸತ್ತು ಕೆಲಸ ಬಿಡಲು ನಿರ್ಧಾರ ಮಾಡಿದ್ದ ಎಂದು ತಿಳಿದು ಬಂದಿದೆ.

ಕೊನಪ್ಪನ ಅಗ್ರಹಾರ ಫಾರ್ಚುನ್ ಸೂಟ್ಸ್ ಹೋಟೆಲ್‌ನಲ್ಲಿ ಚಾಲಕ ವಿಲಿಯಮ್ ರೂಮ್ ಮಾಡಿಕೊಂಡಿದ್ದರು. ಹೀಗಿದ್ದಾಗ ಕಳೆದ 17ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೋಟೆಲ್‌ ಬಳಿ ಕಾರು ನಿಲ್ಲಿಸಿಕೊಂಡಿದ್ದಾಗ, ಅಲ್ಲಿಗೆ ಬಂದಿದ್ದ ರಾಜೀವ್ ರಂಜನ್, ರೆಹಾನ್ ಮಲ್ಲಿಕ್ ಏಕಾಏಕಿ ವಿಲಿಯಮ್‌ ಮೇಲೆ ಹಲ್ಲೆ ಮಾಡಿದ್ದಾರೆ. ಫೋನ್ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದಕ್ಕೆ ಥಳಿಸಿದ್ದಾರೆ.

ಇದನ್ನೂ ಓದಿ : Drugs Mafia : ಸಾಗರದಲ್ಲಿ ಡ್ರಗ್ಸ್‌ ಮಾರಾಟ ಯತ್ನ: ಲಾಂಗ್‌ ಸಹಿತ ಇಬ್ಬರ ಅರೆಸ್ಟ್‌, ಕೊಲೆ ಸಂಚೂ ಬಯಲು

Exit mobile version