Site icon Vistara News

Road Accident | ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್‌ ಡಿಕ್ಕಿ; ಸ್ಥಳದಲ್ಲೇ ಸಾವು, ಸವಾರ ಗಂಭೀರ

davanagere bike accident women death

ದಾವಣಗೆರೆ: ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್‌ವೊಂದು ಡಿಕ್ಕಿ ಹೊಡೆದ (Road Accident) ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬೈಕ್‌ ಸವಾರನಿಗೆ ತೀವ್ರವಾಗಿ ಗಾಯಗಳಾಗಿವೆ.

ನಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ದೃಶ್ಯಾವಳಿಯು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಲ್ಲೂರು ನಿವಾಸಿ ರೇಣುಕಾ (48) ಮೃತ ದುರ್ದೈವಿ. ಬೈಕ್‌ ಸವಾರ ಪ್ರದೀಪ್‌ಗೆ (18) ತೀವ್ರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರೇಣುಕಾ ನಿಧಾನವಾಗಿ ರಸ್ತೆ ದಾಟುತ್ತಿದ್ದರು. ಈ ವೇಳೆ ಬೈಕ್‌ ವೇಗವಾಗಿ ಬಂದಿದ್ದು, ಮಹಿಳೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‌ ಸವಾರ ತಪ್ಪಿಸಲು ಪ್ರಯತ್ನಪಟ್ಟನಾದರೂ ಪಕ್ಕದಲ್ಲಿ ರಸ್ತೆ ಅಂಚಿದ್ದರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಅದೇ ವೇಗದಲ್ಲಿ ಮಹಿಳೆಗೆ ಡಿಕ್ಕಿ ಹೊಡೆಯಲಾಗಿದೆ. ಇದರಿಂದಾಗಿ ರೇಣುಕಾ ಅವರು ರಸ್ತೆ ಮಧ್ಯೆಯೇ ಹಾರಿ ಬಿದ್ದಿದ್ದಾರೆ. ಬೈಕ್‌ ಸವಾರ ಸಹ ಕೆಳಗ್ಗೆ ಬಿದ್ದಿದ್ದು, ಬೈಕ್‌ ಸಮೇತ ಜಾರಿ ಹೋಗಿದ್ದಾನೆ.

ರಕ್ಷಣೆಗೆ ಸ್ಥಳೀಯರು ಬಂದರಾದರೂ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂಬುದು ತಿಳಿದು ಬಂದಿದೆ. ಇನ್ನು ಬೈಕ್‌ ಸವಾರ ಪ್ರದೀಪ್‌ಗೆ ಸಹ ಗಂಭೀರ ಗಾಯಗಳಾಗಿದೆ. ಈ ಅಪಘಾತದ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road accident | ಅಪಘಾತದಲ್ಲಿ ಹೊತ್ತಿ ಉರಿದ ಬೊಲೆರೊ, ಬೈಕ್‌ನಲ್ಲಿದ್ದ ಇಬ್ಬರ ದಾರುಣ ಮೃತ್ಯು

Exit mobile version