Site icon Vistara News

Road Accident: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಸಾಗುವಾಗ ಬೈಕ್‌ ಸ್ಕಿಡ್‌; ತಲೆ ಮೇಲೆ ಲಾರಿ ಹರಿದು ಮಹಿಳೆ ಮೃತ್ಯು

Road Accident Bike skidded while returning from leaving her daughter at college Woman dies after truck runs over her head

ಬೆಂಗಳೂರು: ಮಹಿಳೆಯೊಬ್ಬರು ಮಗಳನ್ನು ಕಾಲೇಜಿಗೆ ಬಿಟ್ಟು ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದಾಗ ಸ್ಕಿಡ್‌ ಆಗಿ ಕೆಳಗೆ ಬಿದ್ದ ಪರಿಣಾಮ ಪಕ್ಕದಲ್ಲಿ ಹೋಗುತ್ತಿದ್ದ ಕ್ಯಾಂಟರ್‌ವೊಂದು ತಲೆ ಮೇಲೆ ಹರಿದಿದ್ದರಿಂದ (Road Accident) ಸ್ಥಳದಲ್ಲಿಯೇ ಮೃತಪಟ್ಟಿರುವ ಪ್ರಕರಣ ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಾಜಿನಗರದ ನಿವಾಸಿ ಸುಧಾ (37) ಮೃತ ಮಹಿಳೆಯಾಗಿದ್ದಾರೆ. ಕಸ್ತೂರಿ ಬಾ ರಸ್ತೆಯಲ್ಲಿ ಅಪಘಾತ ನಡೆದಿದೆ. ಸುಧಾ ತಮ್ಮ‌ ಮಗಳನ್ನು ಬೆಳಗ್ಗೆ ಖಾಸಗಿ ಕಾಲೇಜಿಗೆ ಬಿಟ್ಟು ವಾಪಸ್ ಬರುತ್ತಿದ್ದಾಗ ರಸ್ತೆ ಮಧ್ಯೆ ಯಾವುದೋ ವಾಹನದಿಂದ ಆಯಿಲ್ ಸೋರಿಕೆಯಾಗಿತ್ತು. ಇದರ ಮೇಲೆ ದ್ವಿಚಕ್ರ ವಾಹನದ ಟೈರ್‌ ಬರುತ್ತಿದ್ದಂತೆ ಸ್ಕಿಡ್‌ ಆಗಿದೆ.

ಇದನ್ನೂ ಓದಿ: Aero India 2023: ಕರ್ನಾಟಕದ ಯುವಕರೇ ನಿಮ್ಮ ತಾಂತ್ರಿಕ ಕೌಶಲವನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿ: ಪ್ರಧಾನಿ ನರೇಂದ್ರ ಮೋದಿ ಕರೆ

ಸ್ಕೂಟರ್‌ ಸ್ಕಿಡ್‌ ಆದಾಗ ಸುಧಾಗೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಪಕ್ಕದಲ್ಲಿ ಬರುತ್ತಿದ್ದ ಲಾರಿಯೊಂದು ತಲೆ ಮೇಲೆ ಹರಿದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸುಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಹಾಗೂ ಚಾಲಕನನ್ನು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

Exit mobile version