Site icon Vistara News

Road Accident | ಬಸ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಸಾವು; ಡ್ರೈವರ್- ಕಂಡಕ್ಟರ್‌ಗೆ ಥಳಿತ

accident davanagere jagaluru Prof Vasudevan passes away

ಬೆಂಗಳೂರು: ಅವರು ಮನೆ ಸೇರಲು ಕೇವಲ 200 ಮೀಟರ್ ದೂರದಲ್ಲಿದ್ದರು. ಆದರೆ, ಅದೃಷ್ಟ ಕೆಟ್ಟಿತ್ತು, ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಜವರಾಯ ಕಾದುಕುಳಿತಿದ್ದ. ಬಸ್‌ಗೆ ಬೈಕ್‌ ಡಿಕ್ಕಿಯಾಗಿ ಅವರು ಕೊನೆಯುಸಿರೆಳೆಯುವಂತಾಯಿತು.

ರಾಜಾಜಿನಗರ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಜಕುಮಾರ್ ರಸ್ತೆಯಲ್ಲಿ ಮಧ್ಯರಾತ್ರಿ 1.30ರ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ ಹಾಗೂ ಬೈಕ್‌ ನಡುವೆ ಅಪಘಾತ (Road Accident) ಸಂಭವಿಸಿದೆ.

ಬೈಕ್ ಸವಾರ ರಮೇಶ್ ಎಂಬುವವರು ಬಸ್‌ ಅನ್ನು ಓವರ್ ಟೇಕ್ ಮಾಡಿ ಬಲತಿರುವು ಪಡೆದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಬಸ್ ಬೈಕ್‌ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಮೃತಪಟ್ಟಿದ್ದಾರೆ.

ಕುಡಿದು ಬೈಕ್‌ ಚಾಲನೆ ಆರೋಪ
ಕುಡಿದು ಬೈಕ್ ಚಾಲನೆ ಮಾಡಲಾಗಿದೆ, ಅಲ್ಲದೆ, ಘಟನೆ ನಂತರ ಮೃತನ ಸ್ನೇಹಿತರು ನಮಗೆ ಮನಬಂದಂತೆ ಥಳಿಸಿದ್ದಾರೆ ಎಂದು ಕೆಎಸ್ಆರ್‌ಟಿಸಿ ಬಸ್‌ ಚಾಲಕ ಮತ್ತು ನಿರ್ವಾಹಕ ಮೃತನ ಸ್ನೇಹಿತರ ವಿರುದ್ಧ ಆರೋಪಿಸಿದ್ದಾರೆ. ಸುಮಾರು 15-20 ಜನ ಹಲ್ಲೆ ಮಾಡಿದ್ದಾರೆ ಎಂದು ಬಸ್ ಸಿಬ್ಬಂದಿ ಆರೋಪಿಸಿದ್ದಾರೆ. ಇತ್ತ ಮೃತ ರಮೇಶ್ ಸ್ನೇಹಿತರು ಬಸ್ ಚಾಲಕನ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದಿದ್ದಾರೆ.

ಘಟನೆ ಸಂಬಂಧ ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್‌ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಸಂಬಂಧ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Pothole | ಯಮಸ್ವರೂಪಿ ರಸ್ತೆ ಗುಂಡಿಯಿಂದಾಗಿ ಕೋಮಾಗೆ ಹೋದ ಬೈಕ್‌ ಸವಾರ

Exit mobile version