Site icon Vistara News

Road Accident | ರಸ್ತೆ ಬದಿಯಲ್ಲಿ ನಿಂತಿದ್ದ ಮೀನು ವ್ಯಾಪಾರಿಯ ಪ್ರಾಣ ತೆಗೆದ ಬೊಲೆರೋ ಪಿಕಪ್ ವಾಹನ

ಶಿವಮೊಗ್ಗ: ಇಲ್ಲಿನ ಹೊಸನಗರ ತಾಲೂಕಿನ ಗರ್ತಿಕೆರೆ ಕಾಲೇಜು ಸಮೀಪ ಬೊಲೆರೋ ಪಿಕಪ್‌ ವಾಹನವು ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Road Accident) ನಡೆದಿದೆ. ಗರ್ತಿಕೆರೆ ನಿವಾಸಿ ಕಬೀರ್ ಸಾಬ್ (65) ಮೃತ ದುರ್ದೈವಿ.

ಮೀನು ವ್ಯಾಪಾರಿ ಆಗಿರುವ ಕಬೀರ್‌ ಸಾಬ್‌ ತಮ್ಮ ಎಕ್ಸ್ಎಲ್ ಸೂಪರ್ ಬೈಕ್‌ ಜತೆ ರಸ್ತೆ ಬದಿ ನಿಂತಿದ್ದರು. ಈ ವೇಳೆ ತೀರ್ಥಹಳ್ಳಿ ಕಡೆಯಿಂದ ಬೊಲೆರೋ ಪಿಕಪ್ ವಾಹನವು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಕಬೀರ್‌ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಇತ್ತ ಅಪಘಾತದಲ್ಲಿ ಬೊಲೆರೋ ವಾಹನವು ಪಲ್ಟಿ ಆಗಿದೆ.

ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Santro Ravi case | ಮಹಿಳಾ ವೈದ್ಯರನ್ನೂ ದುರ್ಬಳಕೆ ಮಾಡಿಕೊಳ್ತಿದ್ದ ಸ್ಯಾಂಟ್ರೋ: ಒಬ್ಬ ಡಾಕ್ಟರ್‌ರಿಂದ ಐದು ಜನರ ಗರ್ಭಪಾತ!

Exit mobile version