Site icon Vistara News

Road Accident : ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್‌ ಪಲ್ಟಿ; ಟೈರ್‌ ಸ್ಫೋಟಕ್ಕೆ ಹೊತ್ತಿ ಉರಿದ ಕಾರು

Bus carrying Ayyappa maladhari overturns in Chikmagalur

ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಬ್ಯಾಕ್‌ ಟು ಬ್ಯಾಕ್‌ ರಸ್ತೆ ಅಪಘಾತಗಳು (Road Accident) ನಡೆಯುತ್ತಲೆ ಇವೆ. ಸದ್ಯ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿದ್ದ ಬಸ್ ಪಲ್ಟಿಯಾಗಿದೆ. ಕೊಪ್ಪ ತಾಲೂಕಿನ ಗುಡ್ಡೆತೋಟ ಬಳಿ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಬಸ್ ಪಲ್ಟಿಯಾಗಿದೆ. ಮೈಸೂರು ಮೂಲದ 34 ಜನ ಮಾಲಾಧಾರಿಗಳಲ್ಲಿ 15 ಜನರಿಗೆ ಗಾಯವಾಗಿದೆ. ಗಾಯಾಳುಗಳು ಶೃಂಗೇರಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಸ್ತೆ ತಿರುವಿನಲ್ಲಿ ಸ್ಕಿಡ್ ಆಗಿ ಬಸ್‌ ಪಲ್ಟಿಯಾಗಿದೆ. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಲಾರಿ-ಬಸ್‌ ಡಿಕ್ಕಿ; ಚಾಲಕರಿಬ್ಬರಿಗೂ ಗಾಯ

ಯಾದಗಿರಿ ಜಿಲ್ಲೆಯ ಸುರಪುರದ ದೇವಾಪುರ ಗ್ರಾಮದಲ್ಲಿ ಲಾರಿ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಇಬ್ಬರು ಚಾಲಕರು ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ನಡೆದ ಘಟನೆ ನಡೆದಿದೆ. ರಸ್ತೆ ಅಪಘಾತದಿಂದಾಗಿ ಇತರೆ ವಾಹನಗಳ ಸಂಚಾರವು ಸ್ಥಗಿತಗೊಂಡಿತ್ತು. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Free Bus Effect No Bus For Students

ಇದನ್ನೂ ಓದಿ: Road Accident : ಲಾರಿ-ಬೈಕ್‌ ಮುಖಾಮುಖಿ ಡಿಕ್ಕಿ; ಸವಾರನ ತಲೆ ಛಿದ್ರ, ಮತ್ತೊಬ್ಬ ಗಂಭೀರ

ಟೈರ್‌ ಸ್ಫೋಟ- ಹೊತ್ತಿ ಉರಿದ ಕಾರು

ಟೈರ್ ಸ್ಫೋಟಗೊಂಡು ಓಮಿನಿ ಕಾರೊಂದು ಧಗಧಗನೇ ಹೊತ್ತಿ ಉರಿದಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿ ಟೈರ್ ಸ್ಫೋಟವಾಗಿ ಪಲ್ಟಿ ಹೊಡೆದಿದೆ. ಬಳಿಕ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಯಾದಗಿರಿಯಿಂದ ಕಲಬುರಗಿಗೆ ಬರುತ್ತಿದ್ದಾಗ ಘಟನೆ ನಡೆದಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಚಿತ್ತಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Free Bus Effect No Bus For Students

ಟೈಟಾಗಿ ಬಸ್‌ ಓಡಿಸಿದ ಚಾಲಕ

ಕುಡಿದ ಅಮಲಿನಲ್ಲಿ ಸಾರಿಗೆ ಬಸ್ ಚಾಲನೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಮಹಿಳೆಗೆ ಬಸ್ ತಾಗಿಸಿದ ಬಸ್ ಚಾಲಕನನ್ನು ಹಿಡಿದು ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಗೋಕಾಕ್ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಗೋಕಾಕ್‌ನಿಂದ ವಾಪಸ್ ಹಿಂದುರಿಗಿಸಿಕೊಳ್ಳಲು ಆಗದಷ್ಟು ಚಾಲಕ ಪಾನಮತ್ತನಾಗಿದ್ದ.

ಇದನ್ನೂ ಓದಿ: Murder Case : ಪ್ರಿಯಕರನಿಂದಲೇ ಹತ್ಯೆಯಾದಳು ಇಬ್ಬರು ಮಕ್ಕಳ ತಾಯಿ!

ಶಕ್ತಿ ಯೋಜನೆ ಎಫೆಕ್ಟ್ ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ.

ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ವಿದ್ಯಾರ್ಥಿಗಳು ಪರದಾಡಿದ್ದಾರೆ. ಬಸ್ ವ್ಯವಸ್ಥೆ ಇರದ ಕಾರಣಕ್ಕೆ ವಿದ್ಯಾರ್ಥಿಗಳು ಟಾಟಾಏಸ್ ವಾಹನ ಹತ್ತಿ ಬರುತ್ತಿದ್ದಾರೆ. ಗಣಿ ನಾಡು ಬಳ್ಳಾರಿಯಲ್ಲಿ ವಿದ್ಯಾರ್ಥಿಗಳನ್ನು ಕುರಿ ಹಿಂಡಿನಂತೆ ತುಂಬಿಕೊಂಡು ಹೋಗಲಾಗುತ್ತಿದೆ. ಭಾನುವಾರ ಎನ್ಎಮ್‌ಎಮ್‌ಎಸ್ ಸ್ಕಾಲರ್ ಶಿಪ್ ಪರೀಕ್ಷೆ ಬರೆಯಲು ಬಳ್ಳಾರಿಯ ಬ್ಯಾಲಚಿಂತೆ, ನಾಗೇನಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ಬಂದಿದ್ದರು. ಬಳ್ಳಾರಿ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಸ್ವ ಕ್ಷೇತ್ರದಲ್ಲೇ ವಿದ್ಯಾರ್ಥಿಗಳು ಪರದಾಟ ಅನುಭವಿಸುತ್ತಿದ್ದರೂ, ಕನಿಷ್ಠ ಬಸ್ ವ್ಯವಸ್ಥೆ ಮಾಡಿಸದ್ದಕ್ಕೆ ಕಿಡಕಾರಿದ್ದಾರೆ.

Free Bus Effect No Bus For Students

ಕೋಲಾರದಲ್ಲಿ ರಾಜಕಾಲುವೆಗೆ ಜಾರಿ ಬಿದ್ದ ಹಸು

ಮೇವು ಆರಿಸಿ ಹೊರಟ ಹಸುವೊಂದು ರಾಜಕಾಲುವೆಗೆ ಕಾಲು ಜಾರಿ ಬಿದ್ದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ರಾಬರ್ಸನ್ ಪೇಟೆ ಬಳಿ ಇರುವ ನ್ಯಾಯಾಲಯದ ಆವರಣದಲ್ಲಿರುವ ರಾಜಕಾಲುವೆ ಇದಾಗಿದೆ. 12 ಅಡಿ ಎತ್ತರ ಇರುವ ರಾಜಕಾಲುವೆಯಲ್ಲಿ ಹಸು ಸಿಲುಕಿಕೊಂಡಿತ್ತು. ಕಾಲುವೆಯಿಂದ ಮೇಲಿಂದ ಹೊರ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು.

ಇದನ್ನೂ ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ನಗರಸಭೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸಿಬ್ಬಂದಿ ಜೆಸಿಬಿ ಬಳಸಿ ರಾಜಕಾಲುವೆಯಿಂದ ಹಸುವನ್ನು ಮೇಲೆತ್ತಿದ್ದಾರೆ. ಹಸುವಿನ ಕಾಲಿಗೆ ಗಾಯವಾಗಿದ್ದರಿಂದ ಪಶು ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಹಸುವನ್ನು ಮಾಲೀಕರಿಗೆ ನಗರಸಭೆ ಸಿಬ್ಬಂದಿ ಒಪ್ಪಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version