Site icon Vistara News

Road Accident | ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಬಸ್‌; ಮಹಿಳೆ ಸಾವು, ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯ

ಆನೇಕಲ್/ತಮಿಳುನಾಡು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಹಳ್ಳಕ್ಕೆ ಉರುಳಿ (Road Accident) ಬಿದ್ದಿದ್ದು, ಸ್ಥಳದಲ್ಲಿಯೇ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಇಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ತಮಿಳುನಾಡು ಗಡಿಯ ಕೆಳಮಂಗಲ ಬಳಿ ಈ ಘಟನೆ ನಡೆದಿದೆ.

ಯಶೋದಾ (45) ಅಪಘಾತದಲ್ಲಿ ಮೃತ ದುರ್ದೈವಿ. ಕೆಳಮಂಗಲ ಗ್ರಾಮದ ತಿರುವಿನಲ್ಲಿ ಚಾಲಕ ಅತಿವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಯಿಂದ ರಾಗಿ ಹೊಲಕ್ಕೆ ಬಸ್ ಉರುಳಿ ಬಿದ್ದಿದೆ.

ಮೃತ ಮಹಿಳೆ

ಬಸ್‌ನಲ್ಲಿ 45 ಪ್ರಯಾಣಿಕರಿದ್ದರು. ಅಪಘಾತದಲ್ಲಿ ಯಶೋದಾ ತೀವ್ರ ರಕ್ತಸ್ರಾವವಾಗಿ ಮೃತಪಟ್ಟರು. ಉಳಿದ 20 ಗಾಯಾಳು ಪ್ರಯಾಣಿಕರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕೆಳಮಂಗಲ ಪೋಲೀಸರು ಭೇಟಿ ನೀಡಿದ್ದು, ಕ್ರೇನ್ ಮೂಲಕ ಬಸ್ ಮೇಲೆತ್ತಿದ್ದಾರೆ.

ಇದನ್ನೂ ಓದಿ | Stone Quarry | ಬಿಸಲವಾಡಿಯಲ್ಲಿ ಕಲ್ಲು ಕ್ವಾರಿ ಕುಸಿದು ಸ್ಥಳದಲ್ಲೆ ಇಬ್ಬರ ಸಾವು; ಮತ್ತೊಬ್ಬ ಗಂಭೀರ

Exit mobile version