Site icon Vistara News

Road accident : ಬಸ್‌ ಪಲ್ಟಿ; ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ 15ಕ್ಕೂ ಹೆಚ್ಚು ಮಂದಿಗೆ ಗಾಯ

road accident bus overturns and 15 passengers going to election duty injured

road accident bus overturns and 15 passengers going to election duty injured

ವಿಜಯಪುರ: ಜಿಲ್ಲೆಯ ಜಿ. ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಕ್ರಾಸ್‌ನಲ್ಲಿ ಚುನಾವಣಾ ಕರ್ತವ್ಯದ ಮೇಲೆ‌ ಹೊರಟಿದ್ದ ಬಸ್‌ ಒಂದು ಪಲ್ಟಿಯಾಗಿ (Road accident) 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಸ್ಸಿನ ಆಕ್ಸಿನ್‌ ತುಂಡಾಗಿ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ ಎನ್ನಲಾಗಿದೆ.

ಬಸ್ಸಿನಲ್ಲಿ ಸುಮಾರು 40ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರು. ಇವರಲ್ಲಿ 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದು ಮುದ್ದೇಬಿಹಾಳ ಚುನಾವಣಾಧಿಕಾರಿ ಚಂದ್ರಕಾಂತ ಪವಾರ್ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.

ಸಿಂದಗಿ ವಿಧಾನಸಭಾ ಕ್ಷೇತ್ರದ ಮತಕೇಂದ್ರ ತರಬೇತಿಗೆ ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಇದಾಗಿದ್ದು, ಮತಕೇಂದ್ರಕ್ಕೆ ಹೋಗುವಾಗ ದಾರಿ ಮಧ್ಯೆ ಈ ಘಟನೆ ಸಂಭವಿಸಿದೆ.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ದೂರು ದಾಖಲಾಗಿದೆ.

ಮನೆ ಕುಸಿದು ಮಹಿಳೆ ಮತ್ತು 24 ದಿನದ ಹಸುಗೂಸು ದುರ್ಮರಣ

ಕೊಪ್ಪಳ: ಮಳೆಯ ಪರಿಣಾಮವಾಗಿ ಮನೆಯೊಂದು ಕುಸಿದು (House collapse) ಮಹಿಳೆ ಹಾಗೂ 24 ದಿನದ ಹಸುಗೂಸು ಮೃತಪಟ್ಟ ದಾರುಣ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳನ್ನು ಫಕೀರಮ್ಮ ಭೋವಿ (55) ಎಂದು ಗುರುತಿಸಲಾಗಿದೆ. 24 ದಿನದ ಹಸುಗೂಸು ಹೆಸರು ಇಡುವ ಮೊದಲೇ ಪ್ರಾಣ ಕಳೆದುಕೊಂಡಿದೆ. ಬಾಣಂತಿ ತಾಯಿ ಕನಕಮ್ಮಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನಕಮ್ಮ ಅವರು ಗರ್ಭಿಯಾಗಿ ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಹೆರಿಗೆಯಾಗಿ 24 ದಿನಗಳಷ್ಟೇ ಕಳೆದಿತ್ತು. ತಾಯಿ ಫಕೀರಮ್ಮ ಅವರು ಮಗಳ ಆರೈಕೆ ಮಾಡುತ್ತಿದ್ದರು.

ಇತ್ತೀಚೆಗೆ ಈ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಳೆಯಿಂದಾಗಿ ಮನೆಯ ಗೋಡೆ ಜರ್ಜರಿತವಾಗಿತ್ತು. ಸೋಮವಾರ ರಾತ್ರಿ ತಾಯಿ, ಮಗಳು ಮತ್ತು ಮೊಮ್ಮಗಳು ಮಲಗಿದ್ದ ವೇಳೆ ಗೋಡೆ ಉರುಳಿಬಿದ್ದಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿನ ಅಜ್ಜಿ ಮತ್ತು ಮೊಮ್ಮಗು ಮೃತಪಟ್ಟಿದೆ. ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road Accident: ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿ; ಇಬ್ಬರ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ

Exit mobile version