Site icon Vistara News

Road Accident : ಡ್ರೈವಿಂಗ್‌ ಸ್ಕೂಲ್‌ ಕಾರಿಗೆ ಕ್ಯಾಂಟರ್‌ ಲಾರಿ ಡಿಕ್ಕಿ; ಐವರಿಗೆ ಗಂಭೀರ ಗಾಯ

#image_title

ತುಮಕೂರು: ಇಲ್ಲಿನ ಗೂಳೂರು ಸಮೀಪದ ಶೂಲದ ಆಂಜನೇಯ ದೇವಸ್ಥಾನ ಬಳಿ ಕಾರು ಮತ್ತು ಕ್ಯಾಂಟರ್ ಲಾರಿ ನಡುವೆ ಅಪಘಾತ (Road Accident) ಸಂಭವಿಸಿದೆ. ಕುಣಿಗಲ್ ಕಡೆಯಿಂದ ಬರುತ್ತಿದ್ದ ಹಾಲಿನ ಕ್ಯಾಂಟರ್ ವಾಹನಕ್ಕೆ ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುತ್ತಿದ್ದ ಡ್ರೈವಿಂಗ್ ಸ್ಕೂಲ್‌ ಕಾರಿಗೆ ಡಿಕ್ಕಿ ಹೊಡೆದಿದೆ.

ಡ್ರೈವಿಂಗ್ ಸ್ಕೂಲ್ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿವೆ. ಹೋಂಡಾ ಆಕ್ಟಿವಾ ಅಡ್ಡ ಬಂದ ಕಾರಣ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಕ್ಯಾಂಟರ್‌ನಲ್ಲಿದ್ದ ಹಾಲು ಭೂಮಿ ಪಾಲಾಗಿದೆ.

ಇದನ್ನೂ ಓದಿ: Demand for bride : ರೈತರಿಗೆ ಹುಡುಗಿ ಸಿಗಲಿ; ದುರ್ಗಾಂಬಿಕೆ ತೇರಿಗೆ ಬಾಳೆಹಣ್ಣು ಎಸೆದು ಕೋರಿಕೆ ಸಲ್ಲಿಸಿದ ಹುಡುಗರು!

Exit mobile version