Site icon Vistara News

Road Accident : ನೆಲಮಂಗಲ ಸಮೀಪ ಬೈಕ್‌ ಸ್ಕಿಡ್;‌ ಹಿಂಬದಿ ಸವಾರ ಸ್ಥಳದಲ್ಲೇ ಸಾವು; ಸವಾರ ಆಸ್ಪತ್ರೆಗೆ ದಾಖಲು

Road Accident

ನೆಲಮಂಗಲ: ತಾಲೂಕಿನ ಯಂಟಗಾನಹಳ್ಳಿ ಸಮೀಪದ ಗೂಬೆಕಲ್ಲಮ್ಮ ದೇವಾಲಯದ ಬಳಿ ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಸ್ಕಿಡ್‌ (Road Accident) ಆಗಿದ್ದು, ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಯಾದಗಿರಿ ಮೂಲದ ನಾಗಪ್ಪ (52) ಮೃತ ದುರ್ದೈವಿ. ಬೈಕ್ ಸವಾರ ಮಲ್ಲಿಕಾರ್ಜುನ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಕ್‌ ವೇಗವಾಗಿ ಹೋಗುತ್ತಿರುವಾಗ ಸ್ಕಿಡ್‌ ಆಗಿದ್ದು, ಇಬ್ಬರೂ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ನಾಗಪ್ಪ ಅವರ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಯಲಹಂಕ ನಾರಾಯಣಪ್ಪ ಲೇಔಟ್‌ನಲ್ಲಿ ಇವರು ವಾಸವಾಗಿದ್ದು, ಕುಣಿಗಲ್‌ಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಇದನ್ನೂ ಓದಿ | Medical negligence : ಜ್ವರ, ಮೈಕೈ ನೋವು ಎಂದು ಆಸ್ಪತ್ರೆ ಸೇರಿದ್ದ ಯುವಕ ಸಾವು; ವೈದ್ಯರ ವಿರುದ್ಧ ಕುಟುಂಬಸ್ಥರ ಪ್ರತಿಭಟನೆ

Exit mobile version