Site icon Vistara News

Road Accident : ಬಸ್‌ಗಳ ಮಧ್ಯೆ ಸಿಲುಕಿ ಮಹಿಳೆಯರಿಬ್ಬರ ದಾರುಣ ಸಾವು!

Road Accident

ತುಮಕೂರು: ಇಲ್ಲಿನ ಕೆಎಸ್ಆರ್‌ಟಿಸಿ ಬಸ್ (Ksrtc bus) ನಿಲ್ದಾಣದಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಎರಡು ಬಸ್‌ಗಳ ನಡುವೆ ಸಿಲುಕಿ ಇಬ್ಬರು ಮಹಿಳೆಯರು (Road Accident) ಮೃತಪಟ್ಟಿದ್ದಾರೆ. ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಗ್ರಾಮದ ಪುಟ್ಟತಾಯಮ್ಮ (60), ಪಂಕಜ (50) ಮೃತ ದುರ್ದೈವಿಗಳು.

ನಿನ್ನೆ ರಾತ್ರಿ ಊಟ ಮಾಡುವಾಗ ಉಚಿತ ಬಸ್ ಪ್ರಯಾಣ ಹಿನ್ನೆಲೆಯಲ್ಲಿ ಗೋರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಲು ಪಂಕಜಾ ಪ್ಲ್ಯಾನ್‌ ಮಾಡಿದ್ದರು. ಅದರಂತೆ ಶುಕ್ರವಾರ ಬೆಳಗ್ಗೆ ಕೆ.ಶೆಟ್ಟಿಹಳ್ಳಿ ನಿವಾಸಿಗಳಾದ ಪಂಕಜಾ, ಪುಟ್ಟತಾಯಮ್ಮ, ಅನುಸೂಯಮ್ಮ ಹಾಗೂ ಮಂಜುಳಾ, ರೇಣುಕಾ, ಪುಷ್ಪ ಸೇರಿದಂತೆ ಒಟ್ಟು 6 ಮಹಿಳೆಯರು ತುಮಕೂರಿಗೆ ಬಂದಿದ್ದರು.

ಇದನ್ನೂ ಓದಿ: Road Accident : ಭೀಕರ ಅಪಘಾತ; ತಿರುಪತಿ ದರ್ಶನ ಮಾಡಿ ಮರಳುತ್ತಿದ್ದ ಒಂದೇ ಕುಟುಂಬದ ಐವರು ದಾರುಣ ಸಾವು

ಕೆ.ಶೆಟ್ಟಿಹಳ್ಳಿಯಿಂದ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಲು ಮಂಡ್ಯ ಮೂಲಕ ತುಮಕೂರು ತಲುಪಿದ್ದರು. ಬೆಳಗ್ಗೆ 9.30ರ ಸುಮಾರಿಗೆ ತುಮಕೂರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗೊರವನಹಳ್ಳಿ ಕಡೆಗೆ ಹೋಗುವ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಗೌರಿಬಿದನೂರು ಕಡೆಯಿಂದ ಬಂದ ಕೆಎಸ್ಆರ್‌ಟಿಸಿ ಬಸ್ ರಿವರ್ಸ್ ತೆಗೆದುಕೊಳ್ಳುವಾಗ ಈ ಅವಘಡ ನಡೆದಿದೆ. ಚಾಲಕನ ಅಜಾಗರೂಕತೆಯಿಂದಾಗಿ ಬಸ್‌ಗೆ ಸಿಲುಕಿದ ಪಂಕಜಾ ಹಾಗೂ ಪುಟ್ಟತಾಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರು ಹಾಗೂ ಕೆಎಸ್ಆರ್‌ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ಚಾಲಕ‌ನ ಅಜಾಗರೂಕತೆಯೇ ಘಟನೆಗೆ ಕಾರಣ ಎಂಬ ಆರೋಪದ ಮೇರೆಗೆ ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಗೋವಿಂದರಾಜು ಹಾಗೂ ನಿರ್ವಾಹಕ ಶಂಕರಯ್ಯನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version