Site icon Vistara News

Road Accident | ಪ್ರತ್ಯೇಕ ಕಡೆಗಳಲ್ಲಿ ನಡೆದ ಭೀಕರ ರಸ್ತೆ ಅಪಘಾತ; ಮೂವರು ಸ್ಥಳದಲ್ಲಿ ಮೃತ್ಯು

ಧಾರವಾಡ/ಕಾರವಾರ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಬುಲೆರೋ ನಡುವೆ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಅಪಘಾತದ ರಭಸಕ್ಕೆ ಬುಲೆರೋ ವಾಹನದಲ್ಲಿದ್ದ ಸೊಲ್ಲಾಪುರ ಮೂಲದ ರಾಜು ಹಿರೇಮಠ (21) ಮತ್ತು ವಿಜಯ ಕಾಶೆ (23) ಮೃತಪಟ್ಟಿದ್ದಾರೆ. ಬುಲೆರೋ ವಾಹನದಲ್ಲಿದ್ದ ಟೊಮೆಟೊ ಎಲ್ಲವೂ ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಆಗಿದ್ದವು. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನವಲಗುಂದ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್‌ ಬುಲೆರೋ ನಡುವೆ ಅಪಘಾತದಲ್ಲಿ ಸವಾರ ಸಾವು
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಂಡಾರ ಗ್ರಾಮದಲ್ಲಿ ಬೈಕ್ ಮತ್ತು ಬುಲೆರೋ ವಾಹನದ ನಡುವೆ ಅಪಘಾತವಾಗಿದ್ದು, ಡಿಕ್ಕಿ ರಭಸಕ್ಕೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳಗೇರಿ ನಿವಾಸಿ ಸುಬ್ರಹ್ಮಣ್ಯ ಗೌಡ (24) ಮೃತ ದುರ್ದೈವಿ. ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road accident | ಇಟ್ಟಿಗೆ ತುಂಬಿದ್ದ ಲಾರಿ ಪಲ್ಟಿ: ಚೆಲ್ಲಾಡಿದ ಇಟ್ಟಿಗೆಗಳ ನಡುವೆ ಕಾರ್ಮಿಕನ ಆಕ್ರಂದನ

Exit mobile version