Site icon Vistara News

Road Accident : ಕಾರಿಗೆ ಬಸ್‌ ಡಿಕ್ಕಿ; ಸಾವಿನ ಸಂಖ್ಯೆ 6ಕ್ಕೆ ಏರಿಕೆ!

Car Bus Accident

ಗದಗ: ಬಸ್ ಡಿಕ್ಕಿಯಾಗಿ ಟಾಟಾ ಸುಮೋನಲ್ಲಿದ್ದ ಐವರು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಗದಗ ಜಿಲ್ಲೆ ನೆರೇಗಲ್ ಪಟ್ಟಣದ ಹೊರ ವಲಯದಲ್ಲಿ ಘಟನೆ ನಡೆದಿದೆ. ಸಾ.ಅಫಜಲಪುರದ ಸಚೀನ್ ಅಬ್ಬಾಸ್ ಕತ್ತಿ (31), ದ್ರಾಕ್ಷಾಯಿಣಿ ಕತ್ತಿ (33), ಮಾದನ ಹಿಪ್ಪರಗಿಯ ಶಿವಕುಮಾರ ಕಲಶೆಟ್ಟಿ (50), ಚಂದ್ರಕಲಾ ಕಲಶೆಟ್ಟಿ (42), ರಾಣಿ ಕಲಶೆಟ್ಟಿ (32) ಮೃತ ದುರ್ದೈವಿಗಳು.

ಮಹೇಶ, ಪ್ರಭುದೇವ, ಅನುಶ್ರೀ, ಹಾಗೂ ದಿಂಗಾಲೇಶ್ವರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆರೇಗಲ್ ಗದ್ದಿಹಳ್ಳದ ಬಳಿ ಬಸ್, ಟಾಟಾ ಸುಮೋ ನಡುವೆ ಮುಖಾಮುಖಿ ಡಿಕ್ಕಿ ಆಗಿದೆ. ಟಾಟಾ ಸೊಮೊನಲ್ಲಿದ್ದವರು ಗಜೇಂದ್ರಗಡ ಕಡೆಯಿಂದ ಶಿರಹಟ್ಟಿ ಕಡೆಗೆ ಹೊರಟಿದ್ದರು. ಗದಗದಿಂದ ಗಜೇಂದ್ರಗಡ ಹೊರಟಿದ್ದ ಬಸ್‌ಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಸುಮೋನಲ್ಲಿದ್ದ ಐವರು ಮೃತಪಟ್ಟಿದ್ದಾರೆ.

ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ನೆರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಯಾಳುಗಳ ವಿಚಾರಿಸಲು ಜಿಲ್ಲಾಸ್ಪತ್ರೆಗೆ ಫಕ್ಕೀರ‌ ದಿಂಗಾಲೇಶ್ವರ ಶ್ರೀಗಳು ಭೇಟಿ ನೀಡಿದರು. ಐವರು ದಾರುಣವಾಗಿ ಮೃತಪಟ್ಟವರನ್ನು ನೆನೆದು ದಿಂಗಾಲೇಶ್ವರ ಶ್ರೀಗಳು ಜಿಲ್ಲಾಸ್ಪತ್ರೆಯಲ್ಲಿ ಕಣ್ಣೀರು ಹಾಕಿದರು. ಅಪಘಾತದಲ್ಲಿ ಮೃತಪಟ್ಟ ಭಕ್ತರು ಶಿರಹಟ್ಟಿ ಸಂಸ್ಥಾನಮಠಕ್ಕೆ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ದಿಂಗಾಲೇಶ ಕಲಶೆಟ್ಟಿ (5) ಮೃತಪಟ್ಟಿದ್ದಾನೆ. ಸಾವಿನ ಸಂಖ್ಯೆ 6ಕ್ಕೆ ಏರಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟಿಟಿ ವಾಹನ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗುಲ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನವೊಂದು ಪಲ್ಟಿಯಾಗಿದೆ. ಶಿರಸಿ ಮೂಲದ 15 ಮಂದಿ ಪ್ರವಾಸಿಗರು ಧರ್ಮಸ್ಥಳದಿಂದ ಹೊರನಾಡಿಗೆ ಹೋಗುತ್ತಿದ್ದರು. ಕೊಟ್ಟಿಗೆಹಾರ ಸಮೀಪದ ದೇವನಗುಲ್ ಬಳಿ ಬರುವಾಗ ಚಾಲಕನ ನಿಯಂತ್ರಣ ಟಿಟಿ ವಾಹನವು ಪಲ್ಟಿಯಾಗಿದೆ.

ಕೂಡಲೇ ಸ್ಥಳೀಯರು ಟಿಟಿಯಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಟಿಟಿಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗೊಂಡಿದ್ದು, ಮೂಡಿಗೆರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರಿಗೆ ಬೈಕ್‌ ಡಿಕ್ಕಿ, ಇಬ್ಬರು ಯುವಕರ ಸಾವು

ಶಿರಸಿ: ಯಲ್ಲಾಪುರ ನಗರದಲ್ಲಿ ನಡೆದ (yellapur news) ಭೀಕರ ಅಪಘಾತವೊಂದರಲ್ಲಿ (road accident) ಇಬ್ಬರು ಯುವಕರು ಸಾವಿಗೀಡಾಗಿದ್ದು, ಇನ್ನೊಬ್ಬ ಯುವಕ ಗಾಯಗೊಂಡಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದೆ. ಸಿಸಿಟಿವಿ ಫೂಟೇಜ್‌ನಲ್ಲಿ ಅಪಘಾತದ ದೃಶ್ಯ ದಾಖಲಾಗಿದೆ. ಯುವಕರು ಮೂವರೂ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಐಲ್ಲಾಫುರ ಪಟ್ಟಣದ ಕೆಬಿ ರಸ್ತೆಯ ಶಾನಭಾಗ ಹೋಟೆಲ್‌ ಬಳಿ ಘಟನೆ ನಡೆದಿದೆ. ಮುಂಬದಿಯಲ್ಲಿ ಹೋಗುತ್ತಿದ್ದ ಇನ್ನೋವಾ ಕಾರು ಇದ್ದಕ್ಕಿದ್ದಂತೆ ಬಲಕ್ಕೆ ಹೋಟೆಲ್‌ ಪಾರ್ಕಿಂಗ್‌ ಪ್ರದೇಶದತ್ತ ತಿರುಗಿಸಿದಾಗ, ಹಿಂದಿನಿಂದ ಅತಿವೇಗವಾಗಿ ಬರುತ್ತಿದ್ದ ಬೈಕ್‌ ಅದಕ್ಕೆ ಡಿಕಿ ಹೊಡೆದಿದೆ. ಮೂವರೂ ರೈಡರ್ಸ್‌ ಚಿಮ್ಮಿ ಬಹುದೂರಕ್ಕೆ ಬಿದ್ದಿದ್ದಾರೆ.

ಅಪಘಾತದ ಗಾಯಗಳಿಂದ ತಾಲೂಕಿನ ಹುಣಶೆಟ್ಟಿ ಕೊಪ್ಪದ ದರ್ಶನ, ರಾಮನಕೊಪ್ಪದ ರಾಜು ಭಂಡಾರಿ ಮೃತಪಟ್ಟಿದ್ದಾರೆ. ಮಹ್ಮದ್ ಜಾಬೀರ್‌ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಇವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ‌‌ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version