ಶಿರಸಿ: ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್ (Government bus overturns) ಒಂದು ರಸ್ತೆ ಸಮೀಪದ ಗದ್ದೆಗೆ ಬಿದ್ದಿದೆ (Road Accident). ಉತ್ತರ ಕನ್ನಡ ಜಿಲ್ಲೆಯ (Uttara Kannada News) ಶಿರಸಿ ತಾಲೂಕಿನ ಹನುಮಂತಿ ಬಳಿ ಘಟನೆ ನಡೆದಿದೆ.
ಬೆಳಗ್ಗಿನ ಮೂರು ಗಂಟೆಯ ಸುಮಾರಿಗೆ ಈ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿ 11 ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ಮಂಗಳೂರಿನಿಂದ ಕುಷ್ಟಗಿಗೆ ತೆರಳುವ ಬಸ್ ಆಗಿದ್ದು, ರಾತ್ರಿ 9 ಗಂಟೆಯ ಹೊತ್ತಿಗೆ ಮಂಗಳೂರು ಬಿಟ್ಟು 3 ಗಂಟೆಯ ಹೊತ್ತಿಗೆ ಶಿರಸಿ ಪ್ರವೇಶ ಮಾಡಿತ್ತು. ಅಲ್ಲಿ ಹನುಮಂತಿ ಎಂಬ ಭಾಗದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದೆ. ಇದು ಸ್ವಲ್ಪ ಅಗಲ ಕಡಿಮೆಯಾಗಿರುವ ರಸ್ತೆಯಾಗಿದ್ದು, ಚಾಲಕನಿಗೆ ನಿಯಂತ್ರಣ ತಪ್ಪಿ ಬದಿಗೆ ಸರಿದಿತ್ತು. ಮುಂದೆ ಚಾಲಕನಿಗೆ ನಿಯಂತ್ರಣ ಮಾಡಲು ಸಾಧ್ಯವಾಗದೆ ಕೆಳಗೆ ಉರುಳಿದೆ.
ಪಲ್ಟಿಯಾದ ರಭಸಕ್ಕೆ ಸಾರಿಗೆ ಬಸ್ ನಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಬೈಕ್‌ಗೆ ಲಾರಿ ಡಿಕ್ಕಿ; ಸವಾರನ ದೇಹ ಛಿದ್ರ ಛಿದ್ರ
ಹಾವೇರಿ/ ಧಾರವಾಡ: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಯೋಗಿಕೊಪ್ಪ ಕ್ರಾಸ್ ಬಳಿ ಯಮಸ್ವರೂಪಿಯಾಗಿ ಬಂದ ಲಾರಿ ಹಾಗೂ ಟಿಪ್ಪರ್ ಬೈಕ್ ಸವಾರನ (Road Accident) ಜೀವ ತೆಗೆದಿದೆ. ಲಾರಿ ಹಾಗೂ ಟಿಪ್ಪರ್ ನಡುವೆ ಡಿಕ್ಕಿಯಾಗಿದ್ದು, ಇದರ ಮಧ್ಯೆ ಸಿಲುಕಿದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ ಸವಾರ ನಾಗರಾಜ ಮಳವಳ್ಳಿ ಎಂದು ತಿಳಿದು ಬಂದಿದೆ. ನಾಗರಾಜನ ಮೇಲೆಯೇ ಲಾರಿ ಹರಿದ ಪರಿಣಾಮ ದೇಹವೆಲ್ಲವೂ ಛಿದ್ರ ಛಿದ್ರಗೊಂಡಿದೆ. ಸ್ಥಳಕ್ಕೆ ಹಂಸಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murder Case: ಜೈಲಿನಿಂದ ಹೊರಬರುತ್ತಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕೊಲೆ