Site icon Vistara News

Road Accident: ಹಾಲೊ ಬ್ಲಾಕ್‌ ಕ್ಯಾಂಟರ್ ಮಗುಚಿ ಇಬ್ಬರ ಸಾವು

canter kills two

ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಎಂಬಲ್ಲಿ ಹಾಲೊ ಬ್ಲಾಕ್ ಕ್ಯಾಂಟರ್ ಮುಗುಚಿ ಬಿದ್ದು (road accident) ಇಬ್ಬರು ಸಾವಿಗೀಡಾಗಿದ್ದಾರೆ. ಜಿಗಣಿ ಸಮೀಪದ ಕುಪ್ಪಸಿದ್ದನ ದೊಡ್ಡಿ ಬಳಿ ಘಟನೆ ನಡೆದಿದೆ.

ಬಿಹಾರ ಮೂಲದ ಕಾರ್ಮಿಕರಾದ ಅಖಿಲೇಶ್(28) ಮಿಥಿಲೇಶ್(30) ಮೃತರು. ರತ್ನಂ ಫ್ಲೋರಿಂಗ್ ಕಂಪನಿಗೆ ಸೇರಿದ ಕ್ಯಾಂಟರ್‌ನಲ್ಲಿ ಹಾಲೊ ಬ್ಲಾಕ್‌ಗಳನ್ನು ತುಂಬಲಾಗಿದ್ದು, ಅದರ ಮೇಲೆ ಕಾರ್ಮಿಕರು ಕುಳಿತಿದ್ದರು. ಕ್ಯಾಂಟರ್ ಮುಗುಚಿದ ಪರಿಣಾಮ ಸಿಮೆಂಟ್ ಬ್ಲಾಕ್‌ಗಳು ಕಾರ್ಮಿಕರ ಮೇಲೆ ಬಿದ್ದಿದ್ದು, ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕುಡಿದ ಮತ್ತಿನಲ್ಲಿ ದಾರಿಹೋಕರನ್ನು ಕೊಂದ ಕ್ಯಾಂಟರ್‌ ಚಾಲಕ

ಆನೇಕಲ್: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕ್ಯಾಂಟರ್ ವಾಹನ ಚಲಾಯಿಸಿದ ಚಾಲಕನೊಬ್ಬ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಪಾದಚಾರಿಗಳನ್ನು ಬಲಿ ಪಡೆದುಕೊಂಡಿದ್ದಾನೆ. ಬೆಂಗಳೂರು- ಹೊಸೂರು ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಯೋಕಾನ್ ಕಂಪನಿ ಮುಂಭಾಗ ಘಟನೆ ನಡೆದಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಕ್ಯಾಂಟರ್ ಚಲಿಸಿದೆ. ಸ್ಥಳದಲ್ಲಿಯೇ ಇಬ್ಬರು ದಾರುಣ ಸಾವು ಕಂಡಿದ್ದಾರೆ. ಇವರನ್ನು ಆಶಿಕ್ (28), ಮನೋಜ್ ಕುಮಾರ್(30) ಎಂದು ಗುರುತಿಸಲಾಗಿದೆ. ಇವರನ್ನು ಕೊಂದ ಬಳಿಕ ಕ್ಯಾಂಟರ್‌ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿದ್ದು, ಮದ್ಯದ ಅಮಲಿನಲ್ಲಿದ್ದ ಚಾಲಕ ಹಾಗೂ ಕ್ಲೀನರ್‌ನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Hit and Run: ಪಾದಚಾರಿಗೆ ಗುದ್ದಿ ಸಾಯಿಸಿ ವಾಹನ ಪರಾರಿ; ಲಾರಿ ಡಿಕ್ಕಿಯಾಗಿ ಶಿಕ್ಷಕಿ ಸಾವು

Exit mobile version