ಆನೇಕಲ್: ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ದಿನಕ್ಕೆ ಒಂದಾದರೂ ಸಾವಿನ ಸುದ್ದಿ ಕೇಳುವಂತಾಗಿದೆ. ಸದ್ಯ ಆನೇಕಲ್ ತಾಲೂಕಿನ ಬಳಗಾರನಹಳ್ಳಿಯ ಸರ್ವಿಸ್ ರಸ್ತೆಯಲ್ಲಿ ಲಾರಿ ಹಾಗೂ ಬುಲೆಟ್ ಬೈಕ್ ನಡುವೆ (Road Accident) ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ತಲೆಯೇ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು-ಹೊಸೂರು ಮುಖ್ಯರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಂತೋಷ್ (28) ಎಂಬಾತ ಮೃತಪಟ್ಟಿದ್ದಾರೆ.
ಸಂತೋಷ್ ಜತೆಗೆ ಇದ್ದ ಹಿಂಬದಿ ಸವಾರ ಪರಿಕ್ಷಿತ್ ಎಂಬಾತನೂ ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತೋಷ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಕ್ಸ್ಫರ್ಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ನಮ್ಮ ಮೆಟ್ರೋ ಟ್ರ್ಯಾಕ್ನಲ್ಲಿ ಜಿಗಿದು ಕುಳಿತ ಬ್ಲ್ಯಾಕ್ ಕ್ಯಾಟ್! ಎದ್ದನೋ ಬಿದ್ದನೋ ಎಂದು ಓಡಿದ ಸಿಬ್ಬಂದಿ
ಬೆಂಗಳೂರು: ಇತ್ತೀಚೆಗೆ ನಮ್ಮ ಮೆಟ್ರೋ (Namma Metro) ನಾನಾ ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ಯುವತಿಯೊಬ್ಬಳು ಕೈ ಜಾರಿದ ಮೊಬೈಲ್ಗಾಗಿ ಮೆಟ್ರೋ ಹಳಿಗೆ ಇಳಿದಿದ್ದಳು. ಬಳಿಕ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ಇದೀಗ ಜೆ.ಪಿ ನಗರದ ಮೆಟ್ರೋ ಹಳಿಯಲ್ಲಿ ಕಪ್ಪು ಬೆಕ್ಕೊಂದು ಟ್ರ್ಯಾಕ್ಗೆ ಇಳಿದು ಸಾಕಷ್ಟು ಆತಂಕವನ್ನು ಸೃಷ್ಟಿಸಿತ್ತು.
ರಾಜಧಾನಿ ಬೆಂಗಳೂರಿಗರ ನೆಚ್ಚಿನ ಟ್ರಾನ್ಸ್ಪೋರ್ಟ್ ಸಿಸ್ಟಂ ಎಂದರೆ ಅದು ನಮ್ಮ ಮೆಟ್ರೋ ಸೇವೆ. ಕನೆಕ್ವಿವಿಟಿ ಸಿಕ್ಕಿದ್ಮೇಲೆ ನಿತ್ಯ ಲಕ್ಷಾಂತರ ಮಂದಿ ಮೆಟ್ರೋ ರೈಲಿನಲ್ಲಿ ಓಡಾಡುತ್ತಾರೆ. ಪೀಕ್ ಟೈಂನಲ್ಲಿ ಜನದಟ್ಟಣೆಯನ್ನು ಕಂಟ್ರೋಲ್ ಮಾಡಲು ಮೆಟ್ರೋ ಸಿಬ್ಬಂದಿ ಹರಸಾಹಸವೇ ಪಡಬೇಕು. ಈ ಮಧ್ಯೆ ಆಗಾಗ ನಡೆಯುವ ಅಚಾತುರ್ಯಗಳು ಸಿಬ್ಬಂದಿಯ ತಲೆನೋವಿಗೆ ಕಾರಣವಾಗಿದೆ.
ಮೆಟ್ರೋ ಸಿಬ್ಬಂದಿ ಅಕ್ಷರಶಃ ಮೈ ಎಲ್ಲ ಕಣ್ಣಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು ಯಾವಾಗ ಮೆಟ್ರೋ ಟ್ರ್ಯಾಕ್ಗೆ ಜಿಗಿದು ಬಿಡುತ್ತಾರೋ ಎಂಬ ಆತಂಕದಲ್ಲಿ ಇದ್ದಾರೆ. ಈ ನಡುವೆ ಜೆ.ಪಿ.ನಗರ ಮೆಟ್ರೋ ಹಳಿಗೆ ಬೆಕ್ಕುವೊಂದು ಜಿಗಿದಿದ್ದು, ಕ್ಷಣ ಕಾಲ ಆತಂಕವನ್ನು ಸೃಷ್ಟಿಸಿತ್ತು.
ಟ್ರ್ಯಾಕ್ನಲ್ಲಿ ಬೆಕ್ಕು ಇರುವುದನ್ನು ಕಂಡ ಪ್ರಯಾಣಿಕರು ಕೂಡಲೇ ಮೆಟ್ರೋ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬೆಕ್ಕನ್ನು ರಕ್ಷಣೆ ಮಾಡಲು ಮುಂದಾಗಿಲ್ಲ. ಬದಲಿಗೆ ಟ್ರ್ಯಾಕ್ನಲ್ಲಿದ್ದ ಬೆಕ್ಕನ್ನು ಓಡಿಸಲು ಮುಂದಾಗಿದ್ದಾರೆ ಎಂದು ಟ್ವಿಟ್ಟರ್ (ಎಕ್ಸ್) ಮೂಲಕ ಆಕ್ರೋಶ ಹೊರಹಾಕಿದ್ದಾರೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.