Site icon Vistara News

Road Accident: ಟ್ರಾಕ್ಟರ್‌ಗೆ ಡಿಕ್ಕಿಯಾದ ಓಮ್ನಿ, ಮೂವರು ಸ್ಥಳದಲ್ಲೇ ಸಾವು

road accident davanagere

ದಾವಣಗೆರೆ: ರಾಜ್ಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಟ್ರಾಕ್ಟರ್‌ಗೆ ಮಾರುತಿ ಓಮ್ನಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗುಳ್ಳೇನಹಳ್ಳಿ ಬಳಿಯ ಬೀರೂರು ರಸ್ತೆ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.

ರುದ್ರೇಶಪ್ಪ (64) ಮಲ್ಲಿಕಾರ್ಜುನ್ (62) ಹಾಗೂ ಗಂಗಮ್ಮ (80) ಸಾವನ್ನಪ್ಪಿದವರು. ಓಮ್ನಿಯಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳು ಚನ್ನಗಿರಿ ತಾಲೂಕಿನ‌ ನಾರಶೆಟ್ಟಿಹಳ್ಳಿ ಗ್ರಾಮದ ನಿವಾಸಿಗಳು. ಸಂತೆಬೆನ್ನೂರು ಕಡೆಯಿಂದ ಚನ್ನಗಿರಿಗೆ ಇವರು ಹೋಗುವಾಗ ಅಪಘಾತ ಸಂಭವಿಸಿದೆ. ಭತ್ತದ ಹುಲ್ಲು ತುಂಬಿಕೊಂಡು ಎದುರಿನಿಂದ ಬರುತ್ತಿದ್ದ ಟ್ರಾಕ್ಟರ್‌ಗೆ ಓಮ್ನಿ ಡಿಕ್ಕಿಯಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಸ್ಥಳದಲ್ಲೇ ‌ಮೂರು ಜನ ಸಾವಿಗೀಡಾಗಿದ್ದಾರೆ. ಗಾಯಾಳುಗಳಿಗೆ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚನ್ನಗಿರಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಾಟಿ ಸುಬ್ರಹ್ಮಣದಲ್ಲಿ ಬಸ್ಸಿಗೆ ಸಿಲುಕಿ ಭಕ್ತ ಸಾವು

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯದಲ್ಲಿ ಬ್ರಹ್ಮ ರಥೋತ್ಸವಕ್ಕೆ‌ ಬಂದಿದ್ದ ಭಕ್ತರೊಬ್ಬರು ಬಸ್ಸಿನ ಹಿಂಬದಿ‌ ಚಕ್ರಕ್ಕೆ ಸಿಲುಕಿ‌ ದಾರುಣ ಸಾವು ಕಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸಮೀಪದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಸಮೀಪ ಘಟನೆ ನಡೆದಿದೆ.

ಘಾಟಿಯಲ್ಲಿ ರಥೋತ್ಸವ ನೋಡಿಕೊಂಡು‌ ಕೆಎಸ್‌ಆರ್‌ಇಟಿಸಿ ಬಸ್ಸಿನಲ್ಲಿ ವಾಪಸ್ ಬರುತ್ತಿದ್ದ ವ್ಯಕ್ತಿ, ಬಸ್‌ನಿಂದ ತರಾತುರಿಯಲ್ಲಿ ಇಳಿಯುವಾಗ ಹಿಂಬದಿ ಚಕ್ರಕ್ಕೆ ಸಿಲುಕಿ ಅವಘಡ ಸಂಭವಿಸಿದೆ. ಪ್ರಯಾಣಿಕ ಬಸ್ಸಿನಿಂದ ಕೆಳಗೆ ಇಳಿಯುವಾಗ ಚಾಲಕ ನೋಡದೆ ಬಸ್‌ ಚಲಾಯಿಸಿದ್ದೇ ಘಟನೆಗೆ ಕಾರಣವಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಸಂಕ್ರಾಂತಿ ಸಂಭ್ರಮ ಮುಗಿಸಿ ಬರುವಾಗ ಅಪಘಾತ; ತಂದೆ, ಪುಟ್ಟ ಮಗಳು ಮೃತ್ಯು

Exit mobile version