Site icon Vistara News

Road accident : ಲಾರಿಗೆ ಬೈಕ್ ಡಿಕ್ಕಿ ಹೊಡೆದು ನರೇಗಾ ಎಂಜಿನಿಯರ್ ಸ್ಥಳದಲ್ಲೇ ಸಾವು; ಸ್ನೇಹಿತನ ಮದುವೆಯಿಂದ ಬರುತ್ತಿದ್ದರು

accident

ದಾವಣಗೆರೆ: ಲಾರಿಗೆ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ (Road accident) ಮೃತಪಟ್ಟಿದ್ದಾರೆ. ದಾವಣಗೆರೆ ಹೊರಭಾಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದ ಈ ಘಟನೆಯಲ್ಲಿ ಮೃತಪಟ್ಟವರನ್ನು ನರೇಗಾ ಎಂಜಿನಿಯರ್‌ ಮಿಥುನ್(34) ಎಂದು ಗುರುತಿಸಲಾಗಿದೆ.

ಮೃತ ಮಿಥುನ್ ದಾವಣಗೆರೆ ತಾಲೂಕಿನ ಹೊಸ ನಾಯಕನ ಹಳ್ಳಿ ನಿವಾಸಿಯಾಗಿದ್ದು, ಜಗಳೂರು ತಾಲೂಕಿನಲ್ಲಿ ನರೇಗಾದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ರಾತ್ರಿ ಸ್ನೇಹಿತನ ಮದುವೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಲಾರಿಯ ಹಿಂಬದಿಗೆ ಅವರ ಬೈಕ್‌ ಡಿಕ್ಕಿ ಹೊಡೆದಿದೆ. ಓವರ್‌ಟೇಕ್‌ ಮಾಡುವ ಹಂತದಲ್ಲೋ, ಅಥವಾ ನಿಯಂತ್ರಣ ತಪ್ಪಿಯೋ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಅವರು ಹಾರಿಬಿದ್ದಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತೀವ್ರ ರಕ್ತಸ್ರಾವವಾಗಿ ಮಿಥುನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಕುರಿತು ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಪಂಡಿತ್‌ ಬಿರ್ಜು ಮಹಾರಾಜ್‌: ಕಥಕ್‌ ನೃತ್ಯ ಪ್ರಕಾರಕ್ಕೆ ತಾರಾಮೌಲ್ಯ ತಂದುಕೊಟ್ಟ ಮಹಾ ಗುರು

Exit mobile version