Site icon Vistara News

Road accident | ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಆಟೋ- ಕ್ಯಾಂಟರ್‌ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತ್ಯು

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗಡಿ ಭಾಗವಾದ ರಂಗನಹಳ್ಳಿ ಗೇಟ್ ಬಳಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ (Road accident) ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ಆಟೋ ಮತ್ತು ಕ್ಯಾಂಟರ್ ನಡುವೆ ಅಪಘಾತ ನಡೆದಿದೆ. ಕೊರಟಗೆರೆ ಮೂಲದ ಕಲಂದರ್ (41), ಜಿಲಾನಿ(36), ಜೆಹರಾ ಬೀ(35) ಮೃತಪಟ್ಟ ದುರ್ದೈವಿಗಳು ಎಂದುಗುರುತಿಸಲಾಗಿದೆ. ಉಳಿದಂತೆ ಇತರೆ ಮೂವರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಇವರು ಭಾನುವಾರ ಕಾರ್ಯ ನಿಮಿತ್ತ ಗೌರಿಬಿದನೂರು ತಾಲೂಕಿನ ಅಲಕಾಪುರಕ್ಕೆ ಆಗಮಿಸಿದ್ದರು. ಕೆಲಸ ಮುಗಿಸಿ ಮರಳುವ ವೇಳೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ತೆರಳಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Road accident | ಶಿವಮೊಗ್ಗದಲ್ಲಿ ಕಾರು-ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವು

Exit mobile version