ಕೋಲಾರ: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಲೂರು ತಾಲೂಕು ಕೋಡಿಹಳ್ಳಿ-ಚೊಡಗೊಂಡನಹಳ್ಳಿ ರಸ್ತೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
ದ್ವಿಚಕ್ರ ಸವಾರ ನಾಗೋಂಡಳ್ಳಿ ಉಮೇಶ್ (35 ವರ್ಷ) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಇವರ ಜತೆಗೆ ಹಿಂಬದಿ ಸವಾರರಾಗಿದ್ದ ದೊಡ್ಡ ಕಲ್ಲಳ್ಳಿ ಗ್ರಾಮದ ಪ್ರವೀಣ್ ಗಾಯಗೊಂಡಿದ್ದಾರೆ. ಗಾಯಾಳು ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ನಾಟಾ ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಎದುರಾಬದುರು ಡಿಕ್ಕಿ ಆಗಿದೆ.
ಇದನ್ನೂ ಓದಿ | Bike accident | ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಬೈಕ್: ಇಬ್ಬರು ಸಾವು, ಒಬ್ಬನ ಸ್ಥಿತಿ ಗಂಭೀರ